'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ
🙏🙏 'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... 🙏🙏
Pages
- ಕೆ.ಜಿ.ಐ.ಡಿ
- KGID ONLINE
- NPS LOGIN
- NCERT
- DIKSHA
- MY YOUTUBE ಚಾನಲ್
- ಆದಾಯ ತೆರಿಗೆ
- ಸವಿ ಮಂಡ್ಯ YOUTUBE ಚಾನಲ್
- ಮುಕ್ತ ಶೈಕ್ಷಣಿಕ ಸಂಪನ್ಮೂಲ
- KSOU(ಮುಕ್ತ ವಿಶ್ವ ವಿದ್ಯಾನಿಲಯ)
- SCHOOL EDUCATION
- ಸರ್ಕಾರಿ ಆದೇಶಗಳು
- HRMS LOGIN
- DSERT
- EDS LOGIN
- K SET
- SATS LOGIN
- KSEEB
- ಪಠ್ಯ ಪುಸ್ತಕಗಳು(1 ರಿಂದ 10)
- ಶಿಕ್ಷಣ ಇಲಾಖೆಯ ಎಲ್ಲಾ ಆದೇಶಗಳು
- ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ
- WORKSHEETS FOR KIDS
- ವಿವಿಧ ಅರ್ಜಿಗಳ ಜೊತೆ ಸಲ್ಲಿಸಬೇಕಾದ ದಾಖಲೆಗಳು
- SDMC ಸಮಗ್ರ
- COMPUTER
- SSP ಸ್ಕಾಲರ್ ಷಿಪ್ ಚೆಕ್
- ಸಂಕ್ಷಿಪ್ತ ಕನ್ನಡ ನಿಘಂಟು
- GPF ಬ್ಯಾಲೆನ್ಸ್ ಶೀಟ್
- ಮಕ್ಕಳವಾಣಿ YOUTUBE
- INSPIRE AWARD
- ರೇಡಿಯೋ ಗಾರ್ಡನ್
- ಆರ್ಥಿಕ ಇಲಾಖೆಯ ಸರ್ಕಾರಿ ಆದೇಶಗಳು
- ಗುರು ಚೇತನ
- ವಿದ್ಯಾರ್ಥಿ ಹಾಗೂ ಶಿಕ್ಷಕರ ಕಲಾಣ ನಿಧಿ
- ENGLISH TO ಕನ್ನಡ ನಿಘಂಟು
- ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿವರ
- SCHOOL DISE CODE SEARCH
- ಸರ್ಕಾರಿ ನೌಕರರ.com
- ಕನ್ನಡ ಪಂಚಾಂಗ
- 4 to 8 ಶೈಕ್ಷಣಿಕ ವಿಡಿಯೋಗಳು
- ಜವಾಹರ್ ನವೋದಯ
- MINISTRY OF EDUCATION
- ಶಾಲಾ ಸಿದ್ಧಿ ಲಾಗಿನ್ ಪೇಜ್
- KGID(ONLINE)
- NAS
- KSOU EXAMS OLD QUESTION PAPERS
- EMPLOYEE SELF SERVICE LOGIN
- PRIVACY POLICY
ಶೈಕ್ಷಣಿಕ
my name
ಕುಮಾರ.ಎನ್ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||
ಇತ್ತೀಚಿನ ಪೋಸ್ಟ್ ಗಳಿಗಾಗಿ✍✍
- 1ರಿಂದ 9ನೇ ತರಗತಿಯವರಗೆ ಮಾದರಿ ಪ್ರಶ್ನೆ ಪತ್ರಿಕೆಗಳು-2023 SA-2
- 2021 ರ ವಾರ್ಷಿಕ ಪರೀಕ್ಷೆಯ ಬಗ್ಗೆ
- 2021-22 ರ ವರ್ಗಾವಣೆ ಆದೇಶಗಳು
- 2021-22 ರ ಸಾಲಿನ ಉಪಯುಕ್ತ ಸಂಪನ್ಮೂಲ
- 2022 ನೇ ಸಾಲಿನ ಶೈಕ್ಷಣಿಕ ಆದೇಶಗಳು
- 2023-24 ನೇ ಸಾಲಿನ ಶಾಲಾ ಶೈಕ್ಷಣಿಕ ದಾಖಲೆಗಳು
- 2024-25 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಶೈಕ್ಷಣಿಕ ದಾಖಲೆಗಳು
- 2024-25 ನೇ ಸಾಲಿನ ಜೂನ್ ತಿಂಗಳ ಶೈಕ್ಷಣಿಕ ಕಾರ್ಯಕ್ರಮಗಳು
- 2025
- 4 ರಿಂದ 8ನೇ ತರಗತಿಯ ನೋಟ್ಸ್ ಗಳು[New]
- 4ರಿಂದ5 ನೇ ತರಗತಿಯ ಗಣಿತ ಅಭ್ಯಾಸ ಪುಸ್ದಕದ ಉತ್ತರಗಳು
- 5
- 5 ರಿಂದ 7 ನೇ ತರಗತಿ ಗಣಿತ (ಸುವೇಗ) ಪುಸ್ತಕದ ಕೀ ಉತ್ತರಗಳು
- 5th to 8th std English (Rainbow) workbook Key Answers
- 7th PAY COMMISSION(7 ನೇ ವೇತನ ಆಯೋಗ)
- 8
- 9 ನೇ ತರಗತಿಯ ಮೌಲ್ಯಾಂಕನದ ಮಾದರಿ ಪ್ರಶ್ನೋತ್ತರ ಪತ್ರಿಕೆಗಳು
- Abbreviation
- B.ED
- BEO ಕಛೇರಿ ಆದೇಶಗಳು(ಮದ್ದೂರು)
- BRP CRP ECO
- C & R RULES
- CCE
- DSERT ವೆಬ್ ಸೈಟಿನಲ್ಲಿ ಪ್ರಕಟಿಸಿರುವ ಕಲಿಕಾ ಫಲಗಳ ಪಟ್ಟಿ
- ECO CLUB
- ENGLISH
- ENGLISH GRAMMAR
- ENGLISH OPPOSITE WORDS
- KGID NPS AND GPF
- KSPSTA ಮದ್ದೂರು
- NAVODAYA 6TH ENTRANCE EXAM TOPPER SAMARTH. K 2023(DISTRICT TOPPER)
- NAVODAYA CUT-OFF MARKS CLASS 6TH(2025)
- NAVODAYA RESULT
- NEP-2020
- NPS
- NTSE AND NMMS
- PAPER NEWS
- PRIVACY POLICY
- SA 1 MODEL QUESTION PAPERS(KALIKA CHETARIKE)
- SAINIK SCHOOL EXAM QUESTIONS PAPERS(ಸೈನಿಕ ಶಾಲೆ)
- SATS
- SDMC(ಎಸ್ ಡಿ ಎಂ ಸಿ)
- SSLC NOTES
- SSLC PASSING PACKAGE
- SSLC PASSING PACKAGE 2025
- SSLC(ಎಸ್.ಎಸ್.ಎಲ್.ಸಿ)
- SSLC(ಎಸ್.ಎಸ್.ಎಲ್.ಸಿ) 2023
- SSLC(ಎಸ್.ಎಸ್.ಎಲ್.ಸಿ) ಪ್ರಶ್ನೆ ಪತ್ರಿಕೆಗಳು2022-23
- TLM
- WORK BOOKS
- WORK SHEETS
- ಅಕ್ಷರ ದಾಸೋಹ(MDM)
- ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ( ADARSHA SCHOOL ENTRANCE EXAM QUESTION PAPERS)
- ಆದಾಯ ತೆರಿಗೆ ಉಳಿತಾಯಕ್ಕೆ ಪರಿಗಣಿಸಬಹುದಾದ ಆಯ್ಕೆಗಳು (ಉಳಿತಾಯದ ಮಾರ್ಗಗಳು)
- ಆದಾಯ ತೆರಿಗೆ ಲೆಕ್ಕಾಚಾರ ನಮೂನೆಗಳು [INCOME TAX CALCULATOR]
- ಆರೋಗ್ಯ ಭಾಗ್ಯ
- ಇಂಧನ ಕ್ಲಬ್
- ಒಗಟುಗಳು
- ಒಗಟುಗಳು | Kannada Ogatugalu
- ಓದು ಕರ್ನಾಟಕ
- ಕನ್ನಡ
- ಕನ್ನಡ ಗಾದೆಗಳು
- ಕನ್ನಡ ಸುಭಾಷಿತಗಳು( KANNADA SHUBHASHITHAGALU)
- ಕಂಪ್ಯೂಟರ್
- ಕಲಿಕಾ ಚೇತರಿಕೆ (KALIKA CHETHARIKE)
- ಕಲಿಕಾ ಚೇತರಿಕೆ ಹಾಳೆಗಳ ಉತ್ತರ ಕೀಲಿ (KALIKA CHETHARIKE KEY ANSWERS)
- ಕಲಿಕಾ ಮಾನಕಗಳು
- ಕಲಿಕೆಯ ಮಾರ್ಗಸೂಚಿ (ತಿಂಗಳುವಾರು)
- ಕ್ರಿಯಾ ಸಂಶೋಧನೆ(ACTION REASERCH)
- ಗಣಿತ ಕಲಿಕಾ ಆಂದೋಲನ
- ಗಳಿಕೆ ರಜೆ
- ಚಟುವಟಿಕೆ ಕಾರ್ಡುಗಳು.
- ಚಂದನ ಚಾನಲ್ ವೇಳಾಪಟ್ಟಿ
- ತರಬೇತಿ ಸಾಹಿತ್ಯಗಳು
- ದಿನ ಪತ್ರಿಕೆಗಳು
- ದೂರದರ್ಶನ
- ದ್ವಿತೀಯ ಸಂಕಲನಾತ್ಮಕ ಪರೀಕ್ಷೆ-2023-24
- ನಲಿ ಕಲಿ ಮತ್ತು ಶಾಲಾ ದಾಖಲೆಗಳು 2023( NALI KALI 2023 RECORDS)
- ನಲಿಕಲಿ
- ನವೋದಯ ಪ್ರಶ್ನೆ ಪತ್ರಿಕೆಗಳು
- ನಾಗರಿಕ ಸೇವಾ ನಿಯಮಗಳು- 2021
- ನೀತಿಕಥೆ
- ಪರ್ಯಾಯ ಶೈಕ್ಷಣಿಕ ಯೋಜನೆ 2021-22.
- ಪಾಠ ಯೋಜನೆ
- ಪ್ರಗತಿ ಪತ್ರಗಳು
- ಪ್ರತಿಭಾ ಕಾರಂಜಿ(PRATHIBHA KARANJI)2023
- ಪ್ರಮಾಣಪತ್ರಗಳ ದಾಖಲೆಗಳು
- ಪ್ರಮುಖ e ಬುಕ್ಸ್
- ಪ್ರಮುಖ ದಿನಾಚರಣೆಗಳು
- ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು
- ಪ್ರಾಥಮಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಪ್ರಮುಖ ದಾಖಲೆಗಳು(IMPORTANT DOCUMENTS)
- ಪ್ರೇರಣಾ ಕ್ಲಬ್
- ಮನೆಗೆಲಸ(HOME WORK)
- ಮಾದರಿ ಪ್ರಶ್ನೆ ಪತ್ರಿಕೆಗಳು 2022
- ಮಾದರಿ ಪ್ರಶ್ನೆಪತ್ರಿಕೆಗಳು -2023 ಸಂಕಲನಾತ್ಮಕ ಮೌಲ್ಯಮಾಪನ(SA-1)MODEL QUESTION PAPERS SA-1 2023
- ಮಾದರಿ ಶಾಲೆಗಳು
- ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿ ಪ್ರಶ್ನೆ ಪತ್ರಿಕೆಗಳು[MORARJI DESAYI]
- ಮೌಖಿಕ ಪ್ರಶ್ನೆಪತ್ರಿಕೆಗಳು(SA-2)
- ರಜಾ ನಿಯಮಗಳು
- ರಾಜ್ಯ ಸರ್ಕಾರಿ ನೌಕರರ ಸಂಘ
- ರೂಪಣಾತ್ಮಕ ಮೌಲ್ಯಮಾಪನ ಮಾದರಿ ಪ್ರಶ್ನೆ ಪತ್ರಿಕೆಗಳು.
- ರೂಪಣಾತ್ಮಕ ಮೌಲ್ಯಮಾಪನ-1ಮಾದರಿ ಪ್ರಶ್ನೆಪತ್ರಿಕೆಗಳು
- ರೂಪಣಾತ್ಮಕ ಮೌಲ್ಯಮಾಪನ-2 ಮಾದರಿ ಪ್ರಶ್ನೆಪತ್ರಿಕೆಗಳು
- ರೇಡಿಯೋ ಪಾಠ
- ವಚನಕಾರರರು
- ವಿಜ್ಞಾನ(SCIENCE)
- ವಿದ್ಯಾಗಮ
- ವಿಶೇಷ ಸೂಚನೆ
- ವೀಡಿಯೊ ಪಾಠಗಳು
- ವೈದ್ಯಕೀಯ ಸುದ್ದಿ ಮತ್ತು ಆದೇಶಗಳು
- ಶಾಲಾ ದಾಖಲೆಗಳು
- ಶಾಲಾ ಸಂಘಗಳು -2023-24
- ಶಾಲಾ ಸಿದ್ಧಿ
- ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳು
- ಶಿಕ್ಷಕರ ಕಲ್ಯಾಣ ನಿಧಿ ಧನಸಹಾಯ
- ಶಿಕ್ಷಕರ ವೈಯಕ್ತಿಕ ಮತ್ತು ಕ್ರೋಢಿಕರಣ(CCE)
- ಶಿಕ್ಷಕರಿಗೆ ಉಪಯುಕ್ತ LOGIN LINK ಗಳು
- ಶಿಕ್ಷಕರಿಗೆ ಉಪಯುಕ್ತ ಅರ್ಜಿಗಳು
- ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಿಕ್ಷಕರಿಗೆ ಅಗತ್ಯವಾಗಿ ಬೇಕಾಗುವ ನಮೂನೆಗಳು:
- ಶೈಕ್ಷಣಿಕ ವೆಬ್ ಲಿಂಕ್ಗಳು
- ಶೈಕ್ಷಣಿಕ ವೆಬ್ಸೈಟ್ಗಳು
- ಸಂಕಲನಾತ್ಮಕ ಮೌಲ್ಯಮಾಪನ-1( SA-1) ಮಾದರಿ ಪ್ರಶ್ನೆ ಪತ್ರಿಕೆಗಳು
- ಸಂಕಲನಾತ್ಮಕ ಮೌಲ್ಯಮಾಪನ-2 ರ ಮಾದರಿ ಪ್ರಶ್ನೆ ಪತ್ರಿಕೆಗಳು(SUMMATIVE ASSESSMENT -2 MODEL QUESTION PAPERS)
- ಸಂಭ್ರಮ ಶನಿವಾರ( NO BAG DAY)
- ಸರ್ಕಾರಿ ಕಾರ್ನರ್
- ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು
- ಸಂವೇದ E ಕ್ಲಾಸ್
- ಸಾಮಾನ್ಯ ಜ್ಞಾನ(GK)
- ಸುಮೇರು
- ಸೇತು ಬಂಧ
- ಸೇತು ಬಂಧ 2023
- ಸೇತುಬಂಧ 2024
- ಸೇತುಬಂಧ ಪೂರ್ವ – ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು
- ಸೇತುಬಂಧ-2021
- ಹನಿಗವನಗಳು- ಲೋಕೇಶ್ ಕಲ್ಕುಣಿ
ಆರೋಗ್ಯ ಭಾಗ್ಯ
ಅಂಗೈಯಲ್ಲಿ ಆರೋಗ್ಯ
👤👤👤👤👤👤👤👤👤👤👤👤👤👤👤
ನಾವು ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನೀರು ಕುಡಿಯಲು ಸರಿಯಾದ ಸಮಯ ಯಾವುದು? ಶರೀರದಲ್ಲಿ ನೀರಿನ ಪರಿಣಾಮವನ್ನು ಗರಿಷ್ಠವಾಗಿಸಲು ಅದನ್ನು ಸೇವಿಸಲು ಅತ್ಯುತ್ತಮ ಸಮಯ ಯಾವುದು ಮತ್ತು ಹಾನಿಕಾರಕ ಪರಿಣಾಮವನ್ನು ತಪ್ಪಿಸಲು ನೀರನ್ನು ಯಾವ ಸಮಯ ದಲ್ಲಿ ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಬೆಳಿಗ್ಗೆ ಎದ್ದ ಬಳಿಕ ಉಪಹಾರವನ್ನು ಸೇವಿಸುವ ಮೊದಲು ಒಂದು ಗ್ಲಾಸ್ ನೀರು ಕುಡಿಯುವುದರಿಂದ ಆಂತರಿಕ ಅಂಗಾಂಗಗಳನ್ನು ಕ್ರಿಯಾಶೀಲಗೊಳಿಸಲು ಮತ್ತು ಶರೀರದಲ್ಲಿಯ ಯಾವುದೇ ನಂಜಿನ ಅಂಶಗಳನ್ನು ನಿವಾರಿಸಲು ನೆರವಾಗುತ್ತದೆ.
ಊಟಕ್ಕೆ ಅರ್ಧ ಗಂಟೆ ಮೊದಲು ಒಂದು ಗ್ಲಾಸ್ ನೀರು ಕುಡಿಯುವುದರಿಂದ ಪಚನ ಕಾರ್ಯ ಸುಗಮವಾಗಿ ನಡೆಯುತ್ತದೆ.
ಊಟಕ್ಕೆ ಕುಳಿತಾಗ ತುತ್ತನ್ನು ಬಾಯಿಗಿಟ್ಟುಕೊಳ್ಳುವ ಮುನ್ನ,ಊಟದ ನಡುವೆ ಅಥವಾ ಊಟವಾದ ತಕ್ಷಣ ನೀರನ್ನು ಕುಡಿಯಲೇಬೇಡಿ. ಹೀಗೆ ಮಾಡುವುದರಿಂದ ನೀರು ಜೀರ್ಣರಸಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಶರೀರವು ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ಅವಕಾಶ ನೀಡುವುದಿಲ್ಲ.
ಸ್ನಾನ ಮಾಡುವ ಮುನ್ನ ಒಂದು ಗ್ಲಾಸ್ ನೀರಿನ ಸೇವನೆಯು ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತದೆ.
ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ನೀರನ್ನು ಸೇವಿಸಿದರೆ ಅದು ರಾತ್ರಿ ಶರೀರದಲ್ಲಿ ಉಂಟಾಗಬಹುದಾದ ನೀರಿನ ಕೊರತೆಯನ್ನು ತುಂಬಿಸುತ್ತದೆ.
👤👤👤👤👤👤👥👤👤👤👤👤👤👤
☕☕"ನಂದಿನಿ ಹಾಲು: ಸರಿಯಾದ ಬಣ್ಣದ ಪ್ಯಾಕೆಟ್ ಆರಿಸಿಕೊಳ್ಳುವುದರ ಹಿಂದಿನ ರಹಸ್ಯ"☕☕
ಎಲ್ಲಾದಕ್ಕೂ ನೀಲಿ ಪ್ಯಾಕೆಟ್ಟೇ ಸರಿಯಲ್ಲ
ಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ.
ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟ್ಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗ್ತವೆ.
ಯಾವ ಉಪಯೋಗಕ್ಕೆ ಯಾವ ಬಣ್ಣದ ಪ್ಯಾಕೆಟ್ ತರ್ಬೇಕು ಅನ್ನೋ ಪ್ರಶ್ನೇನ ಎಲ್ಲರೂ ಹಾಕಿಕೊಳ್ಳೋದಿಲ್ಲ. ಎಲ್ಲರೂ ಯಾವುದು ಕೊಂಡ್ಕೋತಾರೋ ಅದನ್ನೇ ತರೋದು ವಾಡಿಕೆ. ಅದು ಸಾಮಾನ್ಯವಾಗಿ ನೀಲಿ ಬಣ್ಣದ ಪ್ಯಾಕೆಟ್ಟೇ ಆಗಿರುತ್ತೆ!
ಆದರೆ ನಂದಿನಿ ಹಾಲ್ನ ಸರಿಯಾಗಿ ಬಳಸಬೇಕು, ಅದರಿಂದ ಆದಷ್ಟು ಹೆಚ್ಚು ಉಪಯೋಗ ಪಡ್ಕೋಬೇಕು ಅನ್ನೋದಾದರೆ ಕೆಳಗಿನ ಮಾಹಿತಿ ಗಮನದಲ್ಲಿಡಿ...
1. ಹಾಗೇ (ಕಾಯಿಸದೆ) ಕುಡಿಯೋಕ್ಕೆ:
ಬೆಳಗ್ಗೆ ಎದ್ದು ಹಾಲು ಕಾಯಿಸಿ ಕುಡಿಯಕ್ಕೆ ಟೈಮ್ ಇಲ್ವಾ? ಹಾಗಾದರೆ ನಂದಿನಿ ಗುಡ್ ಲೈಫ್ ಮಿಲ್ಕ್ ಪ್ಯಾಕೆಟ್ ತೊಗೊಂಡು ಹಾಗೆಯೇ ಕುಡಿಬೋದು.
ಯಾಕೆ ಗೊತ್ತಾ? ಈ ಹಾಲನ್ನು ಪ್ಯಾಕೆಟಿಗೆ ಹಾಕೋ ಮುಂಚೆನೇ 137 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ 4 ನಿಮಿಷಗಳ ತನಕ ಕಾಯಿಸಿ ತಕ್ಷಣವೇ ತಣ್ಣಗೆ ಮಾಡಿರುತ್ತಾರೆ. ಅದ್ದರಿಂದ ಈ ಹಾಲಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಕ್ಕೆ ಅವಕಾಶವಿಲ್ಲ. ಟೆಟ್ರಾ ಪ್ಯಾಕಿನಲ್ಲಿ ಹಾಕುವುದರಿಂದ ಹೊರಗಿನ ಯಾವ ಉಷ್ಣಾಂಶದಿಂದ ಹಾಲು ಒಡೆಯುವುದಿಲ್ಲ.
2. ಕಾಯಿಸಿ ಕುಡಿಯಲು:
ಉಕ್ಕು ಬರುವ ತನಕ ಕಾಯಿಸಿಕೊಂಡು ಕುಡಿಯುವುದಕ್ಕೆ ನಂದಿನಿಯ ಯಾವ ಬಣ್ಣದ ಪ್ಯಾಕೆಟ್ ಬೇಕಾದರೂ ತರಬಹುದು.
3. ಕಾಫಿ ಅಥವಾ ಟೀ ಮಾಡೋಕ್ಕೆ:
ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದು ಮಾಡಿದರೆ ಹಾಲು ಒದಗುತ್ತದೆ. ಹೆಚ್ಚು ಲೋಟ ಕಾಫಿ/ಟೀ ಮಾಡಬಹುದು. ರುಚಿಯೂ ಚೆನ್ನ.
4. ಗಟ್ಟಿ ಕಾಫಿ ಮಾಡೋಕ್ಕೆ:
ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದು ಗಟ್ಟಿ ಕಾಫಿ ಮಾಡಿಕೊಳ್ಳಬಹುದು. ಪೂರ್ತಿ ಕೆನೆಯ ಅಂಶ ಈ ಹಾಲಿನಲ್ಲಿ ಇರೋ ಹಾಗೆ ಮಾಡಿರುತ್ತಾರೆ. ಆದ್ರೇನೂ ಕೆನೆ-ಕೆನೆ ಕಟ್ಟಿಕೊಳ್ಳುವುದಿಲ್ಲ. ಯಾಕಂದ್ರೆ ಹೊಮೊಜಿನೈಸ್ಡ್ ಹದಕ್ಕೆ ಮಾಡಿರುತ್ತಾರೆ.
5. ಗಟ್ಟಿ ಮೊಸರು ಮಾಡೋಕ್ಕೆ:
ನಂದಿನಿಯ ಸ್ಪೆಶಲ್ ಹಸಿರು ಬಣ್ಣದ ಪ್ಯಾಕೆಟ್ ಅಂದರೆ ಸ್ಪೆಶಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ.
6. ಪಾಯಸ ಅಥವಾ ಹಾಲಿನಿಂದ ಮಾಡುವ ಸಿಹಿ ಪದಾರ್ಥಗಳಿಗೆ:
ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದರೆ ತುಂಬಾ ಚೆನ್ನಾಗಿ ಆಗತ್ತೆ. "ಮಿಲ್ಕ್ ಮೈಡ್" ತರುವ ಬದಲು.
7. ಪುಟ್ಟ ಮಕ್ಕಳಿಗೆ ಕುಡಿಸೋಕೆ:
ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರತ್ತೆ.
8. ಹಿರಿಯರಿಗೆ ಕುಡಿಯಲು:
ನಂದಿನಿಯ ಗುಡ್ ಲೈಫ್ ಸ್ಲಿಮ್ಡ್ ಸ್ಕಿನ್ ಮಿಲ್ಕ್ ಪ್ಯಾಕೆಟ್ ಕೂಡ ತೊಗೊಬಹುದು. ಇದರಲ್ಲಿ ಹೆಸರೇ ಹೇಳುವಂತೆ ಕೊಬ್ಬಿನಂಶ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಜೀರ್ಣಿಸಿಕೊಳ್ಳಲು ಸುಲಭ.
ಇದಲ್ಲದೆ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲೂ ಕಡಿಮೆ ಕೊಬ್ಬಿನಂಶ ಇರತ್ತೆ.
9. ಕೊಬ್ಬು ಇಳಿಸೋಕೆ:
ಕೊಬ್ಬು ಕರಗಬೇಕು ಅಂತ ಹಾಲು ಕುಡಿಯೋದನ್ನ ನಿಲ್ಲಿಸಬಿಟ್ಟರೆ ಬೇರೆ ಪೌಷ್ಟಿಕಾಂಶಗಳ ಕೊರತೆ ಉಂಟಾಗತ್ತೆ.
ಇದಕ್ಕೆ ಸುಲಭವಾಗಿ ಸಿಗುವ ನಂದಿನಿಯ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲಿ ಕಡಿಮೆ ಕೊಬ್ಬಿನಂಶ ಇರತ್ತೆ.
10. ಬೆಳೆಯುವ ಮಕ್ಕಳಿಗೆ:
ಕಿತ್ತಳೆ ಬಣ್ಣದ ನಂದಿನಿಯ ಶುಭಂ ಪ್ಯಾಕೆಟ್...
ಅಥವಾ ಸಂಪೂರ್ಣ ಸ್ಟ್ಯಾಂಡರ್ಡೈಸ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ.
ಯಾಕಂದ್ರೆ ಇದರಲ್ಲಿ ಬೆಳೆಯುವ ಮಕ್ಕಳಿಗೆ ಬೇಕಾಗುವ ಕೊಬ್ಬಿನಂಶ ಇರತ್ತೆ. ಅವರ ದಿನ ನಿತ್ಯದ ಚಟುವಟುಕೆಗಳಿಗೆ ಸಾಕಷ್ಟು ಶಕ್ತಿ ಕೊಡತ್ತೆ.
11. ಬರೀ ಹಸುವಿನ ಹಾಲು ಬೇಕು ಅನ್ನುವವರಿಗೆ:
ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಯಾಕಂದ್ರೆ ಬೇರೆ ಪ್ಯಾಕೆಟ್ನಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಸೇರಿಕೊಂಡಿರತ್ತೆ.
12. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವವರಿಗೆ:
ನ್ಂದಿನಿ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ.
13. ತುಂಬಾ ದಿನ ಇಟ್ಟುಕೊಳ್ಳಬೇಕಾದರೆ:
ಪ್ರವಾಸಕ್ಕೆ ಹೋಗ್ಬೇಕು, ಮಕ್ಕಳಿಗೆ ಹಾಲು ಸಿಗಲ್ವಲ್ಲಾ ಅಂತ ಚಿಂತೆ ಬಂದರೆ ನಂದಿನಿಯ ಗುಡ್ ಲೈಫ್ ಟೆಟ್ರಾ ಪ್ಯಾಕ್ ತೊಗೊಳ್ಳಿ. 10 ದಿನದ ತನಕ ಹಾಲನ್ನು ಹಾಗೆ ಕುಡಿಯಬಹುದು. ಕಾಯಿಸುವುದೂ ಬೇಡ. ಟೆಟ್ರಾ ಪ್ಯಾಕಿನಲ್ಲಿ ಇರುವುದರಿಂದ ಹಾಲು ಒಡೆಯುವುದಿಲ್ಲ.
👥👥👥👥👥👥👥👥👥👥👥👥👥👥👥
*ಕೊಲೆಸ್ಟ್ರಾಲ್ ಎನ್ನುವುದು ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪದಾರ್ಥ*. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಕೆಟ್ಟ (ಬೇಡದ) ಕೊಲೆಸ್ಟ್ರಾಲ್ ಎಂದು ಎರಡು ಪ್ರಕಾರ ಇರುವುದನ್ನು ಕಾಣಬಹುದು.
ದೇಹಕ್ಕೆ ಅಗತ್ಯವಿರುವ ಕೊಲೆಸ್ಟ್ರಾಲ್ ಹಾರ್ಮೋನ್ಗಳ ಉತ್ಪಾದನೆಗೆ, ಜೀರ್ಣಕ್ರಿಯೆಗೆ, ವಿಟಮಿನ್-ಡಿಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ದೇಹಕ್ಕೆ ಬೇಡದ ಕೊಲೆಸ್ಟ್ರಾಲ್ ಅನಗತ್ಯವಾದ ಕೊಬ್ಬಿನಂಶವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತಸಂಚಾರಕ್ಕೆ ಅಡ್ಡಿಯನ್ನುಂಟುಮಾಡುವುದು.
Ads By ZincScroll to Continue
ಆಯುರ್ವೇದ ಟಿಪ್ಸ್: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಮನೆಮದ್ದು
ನಾವು ಸೇವಿಸುವ ಆಹಾರವು ದೇಹಕ್ಕೆ ಅಗತ್ಯವಿರುವ ಪೂರಕ ಮತ್ತು ಮಾರಕವಾದ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುವುದು. ಹಾಗಾಗಿ ಸೇವಿಸುವ ಆಹಾರದ ಬಗ್ಗೆಯೂ ಹೆಚ್ಚು ಗಮನವಹಿಸಬೇಕು. ಕೆಲವು ಸಂಶೋಧನೆಯ ಪ್ರಕಾರ ಭಾರತೀಯರ ಆಹಾರ ಪದ್ಧತಿಯು ಬಹಳ ಸರಳ ಹಾಗೂ ಆರೋಗ್ಯ ಪೂರ್ಣವಾದದ್ದು. ಇವರು ಬಳಸುವ ಆಹಾರ ಉತ್ಪನ್ನಗಳು ದೇಹಕ್ಕೆ ಅಗತ್ಯ ಕೊಲೆಸ್ಟ್ರಾಲ್ ಅನ್ನು ನೀಡಿ, ಅನಗತ್ಯ ಕೊಲೆಸ್ಟ್ರಾಲ್ಅನ್ನು ಹೋಗಲಾಡಿಸುತ್ತದೆ. ಹಾಗಾದರೆ ಆ ಆಹಾರ ಪದಾರ್ಥಗಳು ಯಾವವು ಎನ್ನುವುದನ್ನು ತಿಳಿಯಬೇಕಾದರೆ ಈ ಲೇಖನ ಓದುವುದನ್ನು ಮುಂದುವರಿಸಿ.
ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜವು ಕೊಲೆಸ್ಟ್ರಾಲ್ ಮಟ್ಟ ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆಮಾಡಲು ಸಮರ್ಥವಾಗಿದೆ ಎಂದು ಅನೇಕ ಅಧ್ಯಯನಗಳು ಸಾಬೀತು ಪಡಿಸಿವೆ. ಇದು ಯಕೃತ್ತಿನ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಎಚ್ಡಿಎಲ್ ಕೊಲೆಸ್ಟ್ರಾಲ್ಅನ್ನು ಹೆಚ್ಚಿಸುವುದು.
ಕೊತ್ತಂಬರಿ ಬೀಜ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...
ಮೆಂತೆ
ಯಕೃತ್ತು ಮತ್ತು ಕರುಳಿಗೆ ಬೇಡದ ಅನಗತ್ಯ ಕೊಬ್ಬನ್ನು ಹೀರಿಕೊಂಡು, ಅಗತ್ಯವಿರುವ ಎಚ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ದೇಹಕ್ಕೆ ಬೇಕಾಗುವ ನಾರಿನಂಶವನ್ನು ಒದಗಿಸುತ್ತದೆ.
ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!
ಬೆಳ್ಳುಳ್ಳಿ
ಕೆಲವು ಅಧ್ಯಯನಗಳ ಪ್ರಕಾರ ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಮಟ್ಟದಲ್ಲಿ ಯಾವುದೇ ಪರಿಣಾಮ ಬೀರದಿದ್ದರೂ, ಹೃದಯಕ್ಕೆ ಸಂಬಂಧಿಸಿದ ರಕ್ತನಾಳಗಳ ಆರೋಗ್ಯವನ್ನು ಕಾಪಾಡುತ್ತದೆ. ನಿತ್ಯ ಬೆಳ್ಳುಳ್ಳಿ ಸೇವನೆ ಮಾಡಿದರೆ ಸೆರಮ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಚ್ಡಿಎಲ್ ಮತ್ತು ಟ್ರೈಗ್ಲಿಸರೈಡ್ಗಳ ಮೇಲೆ ಯಾವುದೇ ಪರಿಣಾಮ ಬೀರದು.
ದಾಲ್ಚಿನ್ನಿ
ಇದು ಎಚ್ಡಿಎಲ್, ಟ್ರೈಗ್ಲಿಸರೈಡ್ ಮತ್ತು ಸೆರಮ್ ಗ್ಲೂಕೋಸ್ಅನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. ಇಲಿ ಮತ್ತು ಕೋಳಿಗಳ ಮೇಲೆ ನಡೆಸಿದ ಅಧ್ಯಯನಗಳು ಈ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನೀಡಿವೆ.
ಧಾನ್ಯಗಳು
ಧಾನ್ಯಗಳಲ್ಲಿ ನಾರಿನಂಶವು ಸಮೃದ್ಧವಾಗಿರುವುದು. ಇವು ಕೊಲೆಸ್ಟ್ರಾಲ್ಗಳನ್ನು ಕಡಿಮೆ ಮಾಡಿ, ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತವೆ ಎಂದು ಹೇಳಲಾಗುತ್ತದೆ.
ಬೀಜಗಳು
ಬಾದಾಮಿ, ಪಿಸ್ತಾ, ಆಕ್ರೋಡು ಸೇರಿದಂತೆ ಇನ್ನಿತ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಂಶ ಇರುತ್ತದೆ. ಇವು ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಅನ್ನು ದೇಹಕ್ಕೆ ನೀಡುತ್ತದೆ. ಇವುಗಳ ಸೇವನೆ ಸೂಕ್ತ ರೀತಿಯಲ್ಲಿ ಇರಬೇಕಷ್ಟೆ.
ಈರುಳ್ಳಿ
ಇದರಲ್ಲಿ ಅಲೈಯನೇಸ್, ಕ್ವೆರ್ಸೆಟಿನ್ ಸಪೋನಿನ್ಸ್ ಎನ್ನುವ ಸಂಯುಕ್ತಗಳಿವೆ. ಇವು ಉತ್ತಮ ಕೊಲೆಸ್ಟ್ರಾಲ್ ಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಇಲಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಎಚ್ಡಿಎಲ್ ಹೆಚ್ಚಿಸಿ ಎಲ್ಡಿಎಲ್ಅನ್ನು ಕಡಿಮೆ ಮಾಡುವಲ್ಲಿ ಧನಾತ್ಮಕ ಫಲಿತಾಂಶವನ್ನು ನೀಡಿದೆ ಎನ್ನಲಾಗಿದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿ- ಕ್ಯಾನ್ಸರ್ ವಿರುದ್ಧ ಹೋರಾಡುವ ಸಂಜೀವಿನಿ
ತೆಂಗಿನ ಎಣ್ಣೆ
ಇದರಲ್ಲಿರುವ ಪಾಲಿಫಿನಾಲ್ ಅಂಶವು ಕೊಲೆಸ್ಟ್ರಾಲ್ಮಟ್ಟ, ಟ್ರೈಗ್ಲಿಸರೈಡ್, ಫಾಸ್ಫೋಲಿಪಿಡ್ ಮತ್ತು ಎಲ್ಡಿಎಲ್ಅನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇತರ ತೈಲಗಳಿಗಿಂತ ಇದು ಉತ್ತಮವಾದದ್ದು ಎನ್ನಲಾಗುತ್ತದೆ.
ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!
👥👥👥👥👥👥👥👥👥👥👥👥👥👥👥👥
ನೀವು ತಿಳಿದಿರಬೇಕಾದ ತಣ್ಣೀರು ಸ್ನಾನದ ಲಾಭಗಳು ಬೆಳ್ಳಂಬೆಳಿಗ್ಗೆ ಅಥವಾ ಸಂಜೆ ಕೆಲಸದಿಂದ ಮರಳಿದ ಬಳಿಕ ತಣ್ಣೀರು ಸ್ನಾನ ಸ್ವಲ್ಪ ಕಷ್ಟವೆನ್ನಿಸಬಹುದು. ಆದರೆ ತಣ್ಣೀರು ಸ್ನಾನದ ಆರೋಗ್ಯ ಲಾಭಗಳನ್ನು ತಿಳಿದುಕೊಂಡರೆ ನೀವುಖಂಡಿತವಾಗಿಯೂ ಎರಡನೇ ವಿಚಾರ ಮಾಡದೆ ಅದನ್ನಪ್ಪಿಕೊಳ್ಳುತ್ತೀರಿ.
ಬೆಳಿಗ್ಗೆ ತಣ್ಣೀರು ಸ್ನಾನ ಮಾಡುವುದರಿಂದ ಆಗಾಗ್ಗೆ ಅನಾರೋಗ್ಯಕ್ಕೆ ಗುರಿಯಾಗುವುದು ತಪ್ಪುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ತಣ್ಣಿರು ಸ್ನಾನ ಯಾವುದೇ ವಿಧದಲ್ಲಿಯೂ ಅನಾರೋಗ್ಯಕ್ಕೆ ಚಿಕಿತ್ಸೆಯಲ್ಲದಿದ್ದರೂ ಅದು ವ್ಯಕ್ತಿಗೆ ದಿನವಿಡೀ ಅಗತ್ಯವಿರುವ ಚೈತನ್ಯವನ್ನು ನೀಡುತ್ತದೆ.
ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ
ತಣ್ಣಿರು ಸ್ನಾನವು ಶರೀರದಲ್ಲಿ ರಕ್ತಸಂಚಾರ ಉತ್ತಮಗೊಳ್ಳಲು ನೆರವಾಗುತ್ತದೆ. ತಣ್ಣೀರು ರಕ್ತವು ನಿಮ್ಮ ಅಂಗಾಂಗಗಳಿಗೆ ತಲುಪಲು ಕಾರಣವಾಗುತ್ತದೆ. ರಕ್ತಸಂಚಾರ ಉತ್ತಮವಾಗಿದ್ದಾಗ ನಮ್ಮ ಹೃದಯವೂ ಆರೋಗ್ಯಯುತವಾಗಿರುತ್ತದೆ.
ತ್ವರಿತ ಚೇತರಿಕೆ
ಕಠಿಣ ವ್ಯಾಯಾಮದ ಬಳಿಕ ನಮ್ಮ ಸ್ನಾಯುಗಳು ಮತ್ತು ಸಂದುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ತಣ್ಣೀರು ಸ್ನಾನ ಮಾಡುವುದರಿಂದ ನೋವು ಶಮನಗೊಳ್ಳುತ್ತದೆ. ರಕ್ತಸಂಚಾರ ಉತ್ತಮಗೊಳ್ಳುವುದರಿಂದ ವ್ಯಾಯಾಮದ ದಣಿವು ಶೀಘ್ರವಾಗಿ ಪರಿಹಾರಗೊಳ್ಳುತ್ತದೆ.
ಖಿನ್ನತೆಯಿಂದ ಬಿಡುಗಡೆ
ಮಿದುಳಿನಲ್ಲಿಯ ‘ಬ್ಲೂ ಸ್ಪಾಟ್’ ಖಿನ್ನತೆಯನ್ನು ನಿವಾರಿಸುವ ನೋರಾಡ್ರೆನಲಿನ್ ಎಂಬ ರಾಸಾಯನಿಕವನ್ನು ಉತ್ಪಾದಿಸುವ ಪ್ರಮುಖ ಮೂಲವಾಗಿದೆ. ತಣ್ಣೀರು ಸ್ನಾನವು ಈ ‘ಬ್ಲೂ ಸ್ಪಾಟ್’ಅನ್ನು ಉದ್ದೀಪಿಸುವಲ್ಲಿ ನೆರವಾಗುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ತಣ್ಣೀರು ಸ್ನಾನವು ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅದು ವೈರಸ್ಗಳ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ತನ್ಮೂಲಕ ರೋಗ ನಿರೋಧಕ ಶಕ್ತಿಯನ್ನು ಕ್ರಿಯಾಶೀಲಗೊಳಿಸುತ್ತದೆ.
ಫಲವತ್ತತೆಯನ್ನು ಹೆಚ್ಚಿಸುತ್ತದೆ
ತಣ್ನೀರು ಸ್ನಾನವು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎನ್ನುವುದು ಹಲವಾರು ಅಧ್ಯಯನಗಳಿಂದ ಕಂಡು ಬಂದಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚುವುದರಿಂದ ಅವರ ಫಲವತ್ತತೆಯು ಹೆಚ್ಚುತ್ತದೆ.
ಶಕ್ತಿಯನ್ನು ಹೆಚ್ಚಿಸುತ್ತದೆ
ಉದ್ಯೋಗದ ಜಂಜಾಟಗಳಿಂದ ಪಾರಾಗಿ ಮನೆಗೆ ಮರಳಿದಾಗ ಅಥವಾ ವ್ಯಾಯಾಮದ ಬಳಿಕ ತಣ್ಣೀರು ಸ್ನಾನ ಮಾಡುವುದರಿಂದ ಶರೀರಕ್ಕೆ ಅಗತ್ಯ ಶಕ್ತಿ ದೊರೆಯುತ್ತದೆ. ತಣ್ಣೀರು ಸ್ನಾನದಿಂದ ರಕ್ತವು ಶರೀರದ ಎಲ್ಲ ಭಾಗಗಳಿಗೂ ತಲುಪುತ್ತದೆ ಮತ್ತು ಶರೀರಕ್ಕೆ ಚೈತನ್ಯ ನೀಡುತ್ತದೆ.
👥👥👥👥👥👥👥👥👥👥👥👥👥👥👥👥
ಹಾಗಲಕಾಯಿ :
♦ ಪದೇಪದೆ ಬಾಯಿ ಹುಣ್ಣಿನ ಸಮಸ್ಯೆ ಕಾಡುತಿದ್ದರೆ ಹಾಗಲಕಾಯಿಯ ರಸಕ್ಕೆ ಸೀಮೆಸುಣ್ಣವನ್ನು ಬೆರೆಸಿ ಹುಣ್ಣಿನ ಮೇಲೆ ಲೇಪಿಸಿದರೆ ಹುಣ್ಣು ಬೇಗ ಮಾಯವಾಗುತ್ತದೆ.
♦ ಹಾಗಲಕಾಯಿ ಎಲೆಯಿಂದ ರಸ ತೆಗೆದು ಆ ರಸವನ್ನು ಅಂಗಾಲುಗಳಿಗೆ ಹಚ್ಚಿದರೆ ಅಂಗಾಲು ಉರಿ ಕಡಿಮೆಯಾಗುತ್ತದೆ.
♦ ಹಾಗಲಕಾಯಿಯನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ 2 - 3 ಗ್ರಾಂ ಪುಡಿಗೆ 1 ಚಮಚ ಜೇನುತುಪ್ಪ ಅಥವಾ ನೀರಿನೊಡನೆ ದಿನಕ್ಕೆ 3 ಬಾರಿ ಊಟದ ಮುಂಚೆ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.
♦ ಹೊಟ್ಟೆಯ ಹುಳುವಿನ ಸಮಸ್ಯೆಗೆ 10 - 12 ಹಾಗಲ ಎಲೆಗಳ ರಸವನ್ನು ತೆಗೆದು 3 - 4 ದಿನಗಳ ಕಾಲ ಸೇವಿಸಿದರೆ ಹೊಟ್ಟೆ ಹುಳುವಿನ ಸಮಸ್ಯೆ ನಿವಾರಣೆಯಾಗುತ್ತದೆ.
♦ ಕೆಟ್ಟ ರಕ್ತದಿಂದ ಉಂಟಾಗುವ ಹುಣ್ಣು ಚರ್ಮದ ತುರಿಕೆ ಮತ್ತು ಕೀವು ಸೋರುವುದನ್ನು ತಡೆಯುವ ಶಕ್ತಿ ಹಾಗಲಕಾಯಿಗಿದೆ.
♦ ಕಾಲರಾ,ಜಾಂಡಿಸ್ ಮತ್ತು ಹುಳುಕಡ್ಡಿಯಂತಹ ಅಪಾಯಕಾರಿ ರೋಗಗಳ ತಡೆಗೂ ಇದು ರಾಮಬಾಣ.
♦ ಇದರಲ್ಲಿರುವ ಹೈಪೋಗ್ಲೈ ಸಮಿಕ್ ಅಂಶ ರಕ್ತದಲ್ಲಿನ ಸಕ್ಕರೆ ಅಂಶವನ್ನು ತಗ್ಗಿಸಿ ರಕ್ತಕ್ಕೆ ಗ್ಲೂಕೋಸ್ ಸರಬರಾಜು ಮಾಡಿ ಸಾಮರ್ಥ್ಯ ಹೆಚ್ಚಿಸುತ್ತದೆ, ಆ ಮೂಲಕ ಮಧುಮೇಹಕ್ಕೆ ನಾಂದಿ ಹಾಡುತ್ತದೆ.
♦ ಆಸ್ತಮಾ, ಗೂರಲು ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಗೆ ಇದರ ಸೇವನೆ ಅತ್ತ್ಯುತ್ತಮ.
ಮಾಹಿತಿ
♦♦♦♦♦ ಆರೋಗ್ಯ ಮಾಹಿತಿ
👥👥👥👥👥👥👥👥👥👥👥👥👥👥👥👥
🌿🌱🌴 *ಮನೆ ಮದ್ದು* 🌵🍀☘ 👉ಮೆಂತ್ಯೆ, ಓಂಕಾಳು, ಜೀರಿಗೆ ಮೂರೂ ಬೆರೆಸಿ ಮೂರು ತಿಂಗಳ ಕಾಲ ತೆಗೆದುಕೊಂಡರೆ…ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗುತ್ತವೆ.
ಬಿಸಿ ನೀರಿನಲ್ಲಿ ಮೆಂತ್ಯೆ, ಓಂಕಾಳು, ಜೀರಿಗೆ ಪುಡಿ ಬೆರೆಸಿ ಕುಡಿದರೆ 3 ತಿಂಗಳಲ್ಲಿ ದೇಹದಲ್ಲಿನ ಕೆಟ್ಟ ಕೊಬ್ಬೆಲ್ಲಾ ಕರಗಿ ತೂಕ ಕಡಿಮೆಯಾಗುತ್ತವೆ.. ಕೇವಲ ತೂಕವಷ್ಟೇ ಅಲ್ಲ… ಕೂದಲ ಬೆಳವಣಿಗೆ, ಹೃದಯ ಸಂಬಂಧಿ ಕಾಯಿಲೆಗಳು, ಮಲಬದ್ಧತೆ ಇನ್ನೂ ಅನೇಕ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿ ಈ ಪುಡಿ ಕೆಲಸ ಮಾಡುತ್ತದೆ. ಆ ಪುಡಿಯನ್ನು ಹೇಗೆ ತಯಾರಿಸಿಕೊಳ್ಳಬೇಕು, ಹೇಗೆ ಬಳಸಬೇಕು… ಅದರಿಂದ ಆಗುವ ಇತರೆ ಉಪಯೋಗಗಳು ಏನು ಎಂದು ತಿಳಿದುಕೊಳ್ಳೋಣ.
👉 *ಬೇಕಾದ ಪದಾರ್ಥಗಳು:*
*250 ಗ್ರಾಂ ಮೆಂತ್ಯೆ*
*100 ಗ್ರಾಂ ಓಂಕಾಳು*
*50 ಗ್ರಾಂ ಜೀರಿಗೆ*
*ತಯಾರಿಸುವ ವಿಧಾನ:*
ಮೊದಲು 3 ಪದಾರ್ಥಗಳನ್ನು ಬೇರೆಬೇರೆ ಹೆಂಚಿನ ಮೇಲೆ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಮೆಂತ್ಯೆ, ಓಂಕಾಳು, ಕಪ್ಪು ಜೀರಿಗೆ ಬೆರೆಸಿ ಪುಡಿ ಮಾಡಿಕೊಳ್ಳಬೇಕು. ಆ ಪುಡಿಯನ್ನು ಗಾಳಿಯಾಡದ ಬಾಟಲಿಯಲ್ಲಿಡಬೇಕು.
*ಬಳಸುವುದು ಹೇಗೆ?*
ನಿತ್ಯ ರಾತ್ರಿ ಊಟದ ಬಳಿಕ 1 ಗ್ಲಾಸ್ ಬಿಸಿ ನೀರಿನಲ್ಲಿ 1 ಸ್ಪೂನ್ ಪುಡಿಯನ್ನು ಬೆರೆಸಿ ಕುಡಿಯಬೇಕು. ಕುಡಿದ ಬಳಿಕ ಯಾವುದೇ ಆಹಾರ ತೆಗೆದುಕೊಳ್ಳಬಾರದು.
ನಿತ್ಯ ಈ ಪುಡಿಯನ್ನು ಬಳಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ವಿಷ ಪದಾರ್ಥಗಳು ಮಲ, ಮೂತ್ರ, ಬೆವರಿನ ಮೂಲಕ ಹೊರಹೋಗುತ್ತವೆ. ನಿಯಮಿತವಾಗಿ 40-45 ದಿನ ಬಳಸಿದರೆ ತುಂಬಾ
ಪ್ರಯೋಜನಕಾರಿಯಾಗುತ್ತದೆ. 3 ತಿಂಗಳು ಬಳಸಿದರೆ ನಿಮ್ಮ ಆರೋಗ್ಯಕ್ಕೆ ಸರಿಸಾಟಿ ಇರಲ್ಲ.
ಈ ಪುಡಿಯನ್ನು ಬಳಸಿದ ಮೇಲೆ ದೇಹದಲ್ಲಿನ ಅಧಿಕ ಕೊಬ್ಬು ಕರಗಿಹೋಗುತ್ತದೆ. ರಕ್ತ ಶುದ್ಧಿಯಾಗುತ್ತದೆ.
ದೇಹದಲ್ಲಿ ಉತ್ತಮವಾದ ರಕ್ತ ಪ್ರವಹಿಸುತ್ತದೆ. ದೇಹದ ಮೇಲಿನ ಸುಕ್ಕುಗಳು ನಿವಾರಣೆಯಾಗುತ್ತದೆ. ಯೌವನದಿಂದ ಇರುತ್ತೀರ. ದೇಹ ದೃಢವಾಗಿ, ಚುರುಗಾಗಿ, ಹೊಳಪಿನಿಂದ ಕೂಡಿರುತ್ತದೆ.
*ಈ ಪುಡಿಯಿಂದ ಆಗುವ ಇತರೆ ಪ್ರಯೋಜನಗಳು:*
ಕೀಲು, ಮೊಣಕಾಲು ನೋವು ಕಡಿಮೆಯಾಗುತ್ತದೆ. ಮೂಳೆಗಳು ಬಲಗೊಳ್ಳುತ್ತವೆ.
ಕಣ್ಣಿನ ದೃಷ್ಟಿ ಚುರುಕಾಗುತ್ತದೆ ಅಲ್ಲದೆ… ವಸಡುಗಳು ದೃಢವಾಗುತ್ತವೆ, ಆರೋಗ್ಯವಾಗಿ ಬದಲಾಗುತ್ತಾರೆ.
ಈ ಹಿಂದೆ ತೆಗೆದುಕೊಂಡಿದ್ದ ಇಂಗ್ಲಿಷ್ ಮೆಡಿಸಿನ್ ಸೈಡ್ ಎಫೆಕ್ಟ್ಸ್ನ್ನು ಇದು ಕ್ಲಿಯರ್ ಮಾಡುತ್ತದೆ. ಕೂದಲ ಬೆಳವಣಿಗೆಯನ್ನು ಇದು ಉತ್ತಮ ಪಡಿಸುತ್ತದೆ.
ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತದೆ. ಮೋಷನ್ ಸುಲಭವಾಗಿ ಆಗುತ್ತದೆ.
ರಕ್ತ ಸಂಚಲನೆ ಉತ್ತಮಗೊಳ್ಳುತ್ತದೆ. ಹೃದಯದ ಕೆಲಸ ಸುಧಾರಿಸುತ್ತದೆ.
ದೀರ್ಘಕಾಲದಿಂದ ಕೆಮ್ಮಿನಿಂದ ಬಳಲುತ್ತಿರುವವರಿಗೆ ಇದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಇದನ್ನು ನಿತ್ಯ ರಾತ್ರಿ ಹೊತ್ತು ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.
ಮಿದುಳು ಚುರುಕಾಗುತ್ತದೆ. ಶ್ರವಣ ಸಾಮರ್ಥ್ಯ ಬೆಳೆಯುತ್ತದೆ. ನಿತ್ಯ ಕೆಲಸಗಳಲ್ಲಿ ಚುರುಕಾಗಿ ಪಾಲ್ಗೊಳ್ಳಬಹುದು.
ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದರ ಫಲಿತಾಂಶಗಳನ್ನು ಗಮನಿಸಿದವರು ಈ ಪುಡಿಯನ್ನು ಮತ್ತೆ ಬಳಸಬೇಕೆಂದರೆ ಮೂರು ತಿಂಗಳಿಗೊಮ್ಮೆ ಹದಿನೈದು ದಿನ ಗ್ಯಾಪ್ ಬಿಟ್ಟು ಮತ್ತೆ ಕುಡಿಯುವುದನ್ನು ಶುರು ಮಾಡಬೇಕು. 🙏🙏🙏👍 *ಓದಿದ ನಂತರ ಎಲ್ಲರಿಗೂ ಶೇರ್ ಮಾಡಲು ಮರೆಯದಿರಿ* 👍🙏🙏🙏
👤👤👤👤👤👤👤👤👤👤👤👤👤
*ಸುಖ ಜೀವನಕ್ಕೆ 35 ಆರೋಗ್ಯ ಸೂತ್ರಗಳು...* ಸಂಪೂರ್ಣವಾಗಿ ಆರೋಗ್ಯಕರವಾದ ಜೀವನವನ್ನು ಹೊಂದ ಬಯಸುವವರು ಈ ಕೆಳಗೆ ತಿಳಿಸಲಾದ 35 ಸೂತ್ರಗಳನ್ನು ಪಾಲಿಸಿ. ಇಂದಿನ ಪೀಳಿಗೆಯ ಜನಾಂಗ ಇದನ್ನು ಮರೆತಿರಬಹುದು. ಅದಕ್ಕೇ ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ.
1. ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು.
2. ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.
3. ಐಸ್ ಕ್ರೀಂ ತಿನ್ನಲೇ ಬಾರದು.
4. ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.
5. ತಂಪು ಪಾನೀಯವನ್ನು ಸೇವಿಸಲೇ ಬಾರದು.
6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ 40 ನಿಮಿಷಗಳ ಒಳಗೆ ತಿನ್ನಬೇಕು.
7.ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.
8. ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.
9. ಬೆಳಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.
10. ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.
11.ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.
12. ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.
13. ಕುಳಿತುಕೊಂಡು ಊಟ ಮಾಡಬೇಕು.
14.ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.
15. ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.
16. ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.
17. ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.
18. ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.
19. ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.
20. ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.
21.ರಾತ್ರಿ ಊಟದ ನಂತರ ಒಂದು ಕಿ.ಮೀ ದೂರ ನಡೆಯಬೇಕು.
22. ರಾತ್ರಿ ಊಟವಾದ ಒಂದು ಗಂಟೆಯ ನಂತರ ಹಾಲು ಕುಡಿಯಬೇಕು.
23. ರಾತ್ರಿ ವೇಳೆ ಲಸ್ಸಿ, ಮಜ್ಜಿಗೆ ಕುಡಿಯಬಾರದು.
24. ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.
25. ರಾತ್ರಿ 9-10 ಗಂಟೆಯೊಳಗೆ ಮಲಗಬೇಕು.
26. ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.
27. ರಾತ್ರಿ ಸಲಾಡ್ ತಿನ್ನಬಾರದು.
28. ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.
29. ಟೀ,ಕಾಫೀ ಕುಡಿಯದಿರಲು ಪ್ರಯತ್ನಿಸಿ.
30. ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.
31. ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.
32. ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
33. ಜೂನ್ ನಿಂದ ಸೆಪ್ಟೆಂಬರ್( ಮಳೆಗಾಲ)ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
34. ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.
35. ಊಟ ಮಾಡುವಾಗ ನೀರು ಕುಡಿಯ ಬಾರದು. ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು.
👤👤👤👤👤👤👤👤👤👤👤👤👤👤
*ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ?*
ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ ಪಾದ ಮೇಲೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಅದೇ ಪಾದಗಳಿಗೆ ವ್ಯಾಯಾಮ ಮಾಡುವುದರಿಂದ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ವಿಷಯ ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಪ್ರತಿದಿನ ನೀವು ಯಾವಾಗ್ಯಾವಾಗ ಫ್ರೀ ಇರ್ತೇರೋ ಅವಾಗ, ಟಿವಿ ನೋಡ್ತಿರ್ವಾಗ ಅಥವಾ ನ್ಯೂಸ್ ಪೇಪರ್ ಓದುವಾಗ ನಿಮ್ಮ ಪಾದಗಳನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿಗೆ ಇಟ್ಟು ಅದ್ದುವುದರಿಂದ ನಿಮ್ಮ ಆರೋಗ್ಯವನ್ನು ಇಮ್ಮಡಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳನ್ನು ಪಡ್ಕೋಬೋದು ಎಂದು ತಿಳಿದುಕೊಳ್ಳಲು ಮುಂದೆ ಓದಿ.
*1.ಹಿಮ್ಮಡಿ ಒಡೆಯುವುದು ತಪ್ಪುತ್ತದೆ:*
ಚಳಿಗಾಲದಲ್ಲಿ ಚರ್ಮ,ಪಾದದ ಹಿಮ್ಮಡಿ ಒಡೆದು ಅಸಹ್ಯವಾಗಿ ಕಾಣಿಸಿಕೊಳ್ಳುವುದು ಎಲ್ಲರಲ್ಲೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಸಿ ನೀರಿನಲ್ಲಿ ನಿಮ್ಮ ಪಾದವನ್ನು ಸುಮಾರು ಹದಿನೈದು ನಿಮಿಷಗಳಷ್ಟು ಕಾಲ ಅದ್ದಿಕೊಂಡಿದ್ದರೆ ಸಾಕು.
*2. ಶೀತ ಮತ್ತು ನೆಗಡಿಯ ಹತೋಟಿ :*
ಶೀತ, ನೆಗಡಿ ಮತ್ತು ಕಫ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ನಿಮ್ಮ ಪಾದಗಳನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಹಾಕಿ ಹದ್ದಿಕೊಂಡು ಮೂಗಿನ ಮೂಲಕ ಹಬೆಯನ್ನು ತೆಗೆದುಕೊಳ್ಳುವುದರಿಂದ ಬಹು ಬೇಗ ನಿಮ್ಮ ನಿಮ್ಮ ಕಟ್ಟಿದ ಮೂಗು, ಶೀತ, ನೆಗಡಿ ಸಮಸ್ಯೆಗಳು ಹತೋಟಿಗೆ ಬರುತ್ತವೆ. ಕಫ ಸಮಸ್ಯೆಕೂಡ ಕಡಿಮೆಯಾಗುತ್ತದೆ.
*3. ಕುತ್ತಿಗೆ ನೋವಿನ ಶಮನ:*
ಈಗ ಕುತ್ತಿಗೆ ನೋವು ಹಲವರಲ್ಲಿ ಕಂಡುಬರುತ್ತಿದೆ. ನರಮಂಡಲದ ಮೂಲ ನರಗಳು ಪಾದ ಮತ್ತು ಅಂಗೈನಲ್ಲೂ ಸಹ ಇರುವುದರಿಂದ ಪಾದವನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಅದ್ದಿಕೊಂಡರೆ ಕುತ್ತಿಗೆ ನೋವು ಮತ್ತು ಕುತ್ತಿಗೆಯ ಸೆಳೆತಗಳು ಮಾಯವಾಗುತ್ತದೆ.
*4. ಒತ್ತಡದ ನಿವಾರಣೆ:*
ಬಿಸಿ ನೀರಿನಲ್ಲಿ ನಮ್ಮ ಪಾದಗಳನ್ನು ಸುಮಾರು ಹದಿನೈದು ನಿಮಿಷಗಳ ಹೊತ್ತು ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಚುರುಕುಗೊಂಡು ಮಾನಸಿಕ ಮತ್ತು ದೈಹಿಕ ಒತ್ತಡವು ಕಡಿಮೆಯಾಗುತ್ತದೆ.
*5. ತಲೆನೋವು ಕಡಿಮೆಯಾಗುತ್ತದೆ :*
ಪಾದಗಳನ್ನ ಬಿಸಿ ನೀರಿನಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಅದ್ದಿದಾಗ ಪಾದಕ್ಕೆ ರಕ್ತ ಸಂಚಾರ ಹೆಚ್ಚಾಗುವುದರಿಂದ ಕತ್ತಿನ ಮತ್ತು ಬೆನ್ನಿನ ಸ್ನಾಯುಗಳು ಸಡಿಲವಾಗುತ್ತದೆ. ಹಾಗಾಗಿ ಒತ್ತಡದಿಂದ ಉಂಟಾದ ತಲೆನೋವು ದೂರವಾಗುತ್ತದೆ.
*6. ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ :*
ರಾತ್ರಿ ನೀವು ಮಲಗುವ ಮುಂಚೆ ಹದಿನೈದು ನಿಮಿಷಗಳ ಕಾಲ ನಿಮ್ಮ ಪಾದವನ್ನು ಬಿಸಿನೀರಿನಲ್ಲಿ ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ನಿಮ್ಮ ಒತ್ತಡ ಕಡಿಮೆಯಾಗಿ ನಿಮ್ಮ ನಿದ್ರಾ ಹೀನತೆಯ ಸಮಸ್ಯೆಗೆ ಪರಿಹಾರ ತಂದುಕೊಟ್ಟು ಮತ್ತು ನಿದ್ರೆಯು ಚನ್ನಾಗಿ ಬರುತ್ತದೆ
*7. ಹಿಮ್ಮಡಿ ನೋವಿಗೆ ಪರಿಹಾರ :*
ನೀವು ಹೆಚ್ಚು ಕೆಲಸಮಾಡಿದಾಗ ನಿಮಗೆ ಹಿಮ್ಮಡಿ ನೋವು ಬರುವುದು ಸಾಮಾನ್ಯ. ಈ ರೀತಿ ಹಿಮ್ಮಡಿ ನೋವು ಬಂದಾಗ ನಿಮ್ಮ ಎರಡು ಪಾದಗಳನ್ನು ಬಿಸಿನೀರಿನಲ್ಲಿ ಅದ್ದಿಕೊಳ್ಳುವುದರಿಂದ ಹಿಮ್ಮ ನೋವು ಬಹು ಬೇಗ ಮಾಯವಾಗುತ್ತದೆ.
👤👤👤👤👤👤👤👤👥👥👥👥👥👥👥
*ಎಂತಹ ಕೀಲು ನೋವನ್ನಾದರೂ (ಆರ್ಥರೈಟಿಸ್) ಮೂರು ತಿಂಗಳಲ್ಲೇ ಕಡಿಮೆ ಮಾಡುವ ಅದ್ಭುತವಾದ ಔಷಧ*....!
ಕೂತರೂ, ನಿಂತರೂ, ಬಗ್ಗಿದರೂ…. ಕೀಲು, ಮೂಳೆಗಳ ನೋವು….. ಒಂದು ಹೆಜ್ಜೆ ತೆಗೆದು ಇನ್ನೊಂದು ಹೆಜ್ಜೆ ಹಾಕಬೆಕೆಂದರೇನೆ ತೀವ್ರವಾದ ನೊವು ಅನುಭವಿಸಬೇಕಾಗುತ್ತದೆ. ಅಂತಹ ನೋವನ್ನು ಉಂಟುಮಾಡುತ್ತವೆ ಈ ರುಮಾಟಾಯಿಡ್, ಅರ್ಥರೈಟಿಸ್ ನೋವುಗಳು. ನಿಜವಾಗಲೂ ಎರಡು ಕೀಲುಗಳು, ಮೂಳೆಗಳಿಗೆ ಸಂಬಂದಿಸಿದ ನೋವುಗಳೇ ಆದರೂ ಹೆಚ್ಚು ಕಡಿಮೆ ಒಂದೇ ಕಾಯಿಲೆಯ ಲಕ್ಷಣಗಳನ್ನು ಹೊಂದಿರುತ್ತವೆ. ಆದರೆ ಕೆಳಗೆ ಕೊಟ್ಟಿರುವ ಪವರ್ ಫುಲ್ ಎಫೆಕ್ಟೀವ್ ಟಿಪ್ಸ್’ನ್ನು ಆಚರಿಸಿದರೆ ಕೇವಲ 3 ತಿಂಗಳಲ್ಲಿ ಎಂತಹ ಅರ್ಥರೈಟಿಸ್ ನೋವುಗಳಾದರೂ, ಕ್ಷಣದಲ್ಲಿ ಕಡಿಮೆಯಾಗುತ್ತವೆ. ಆ ಟಿಪ್ಸ್ ಯಾವುದು ಎಂದು ಈಗ ನಾವು ತಿಳಿದುಕೊಳ್ಳೊಣ ಬನ್ನಿ.
*ಪಾರಿಜಾತ ಎಲೆಗಳು…..*
ಪಾರಿಜಾತ ಗಿಡ ನಿಮಗೆ ತಿಳಿದಿರುತ್ತದೆ. ಅದರ ಹೂ ಬಿಳಿಯ ಬಣ್ಣದಲ್ಲಿರುತ್ತದೆ. ರಾತ್ರಿ ಹೊತ್ತಿನಲ್ಲಿ ಈ ಹೂಗಳು ಬಿಡುತ್ತವೆ. ಸುಮಾರು ದೂರದವರೆಗೂ ಈ ಹೂವಿನ ಪರಿಮಳ ವಿರುತ್ತದೆ. ದೇವಾಲಯಗಳಲ್ಲಿ ಹೆಚ್ಚಾಗಿ ಈ ಗಿಡಗಳೇ ಇರುತ್ತವೆ. ಇದರ ಎಲೆಗಳನ್ನು 6, 7 ರಷ್ಟು ತೆಗೆದುಕೊಂಡು ನುಣ್ಣಗೆ ಫೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು. ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು.
*ಮೇಲೆ ಹೇಳಿರುವ ಪಾರಿಜಾತ ಎಲೆಗಳ ಕಷಾಯವು, ರುಮಟಾಯಿಡ್, ಅರ್ಥರೈಟಿಸ್, sciatica, ಸೊಂಟ ನೋವು, ಮಂಡಿ ನೋವುಗಳಿಗೆ, ಶಸ್ತ್ರ ಚಿಕಿತ್ಸೆ ಇಲ್ಲದೆ ಅದ್ಭುತವಾದ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಮಾಡಿಕೊಂಡು ಪ್ರತಿದಿನ ತೆಗೆದುಕೊಂಡರೆ ಕೇವಲ 30 ರಿಂದ 40 ದಿನಗಳಲ್ಲೇ ಎಂತಹ ಕೀಲು ನೋವಾದರೂ ವಾಸಿಯಾಗುತ್ತದೆ. ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ*.
ಜೊತೆಗೆ ಈ ಔಷಧವು ಡೆಂಗಿ ಜ್ವರಕ್ಕೂ ಸಹ ಉಪಯುಕ್ತವಾದದ್ದು. ಡೆಂಗಿ ಕಾರಣವಾಗಿ ಬರುವ ಮೈ ನೋವುಗಳು ಗುಣಮುಖವಾಗಬೇಕೆಂದರೆ ಈ ಔಷಧವನ್ನು ಕುಡಿಯಬೇಕು---ರಾಜೀವ್ ದೀಕ್ಷಿತ್ ಅವರಿಂದ ಬೆಳಕಿಗೆ ಬಂದ ಆಯುರ್ವೇದ ಋಷಿ ವಾಗ್ಭಟರ ಗ್ರಂಥದಿಂದ
👤👤👤👤👤👤👤👤👤👤👤👤👤👤👤
*ಉರಿ ಮೂತ್ರ ಸಮಸ್ಯೆಗೆ ಪರಿಹಾರ*
ಬಿಳಿ ಎಳ್ಳು ಮತ್ತು ಸೌತೆಕಾಯಿ ಬೀಜಗಳನ್ನು ತುಪ್ಪದಲ್ಲಿ ಅರೆದು ಸೇವಿಸುವುದರಿಂದ ಉರಿಮೂತ್ರ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಹೊಟ್ಟೆ ಕಟ್ಟಿರುವುದು ಮೂತ್ರ ವಿಸರ್ಜನೆಗೆ ಕಷ್ಟವಾಗುವುದು ಮತ್ತು ಹೊಟ್ಟೆಯ ಉಬ್ಬರ ಕೂಡ ಕಡಿಮೆ ಆಗುತ್ತದೆ .
ನಾಲ್ಕೈದು ತುಳಸಿ ಎಲೆಗಳನ್ನು ಚೆನ್ನಾಗಿ ಅರೆದು ಹಾಲಿನ ಜೊತೆ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಉರಿಮೂತ್ರ ಕಡಿಮೆಯಾಗುತ್ತದೆ.
ಸ್ವಲ್ಪ ಸುಣ್ಣವನ್ನು ಹರಳೆಣ್ಣೆ ಜೊತೆ ಮಿಶ್ರಣ ಮಾಡಿ ಕಿಬ್ಬೊಟ್ಟೆಯ ಮೇಲೆ ಹಚ್ಚಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ಕಾಲಿನ ಹೆಬ್ಬೆರಳಿಗೆ ಸುಣ್ಣವನ್ನು ಹಚ್ಚುವುದರಿಂದ ಸಹ ಉರಿಮೂತ್ರ ರೋಗ ಕಡಿಮೆಯಾಗುತ್ತದೆ .
ಒಂದು ಲೋಟ ಮಜ್ಜಿಗೆಗೆ ಒಂದು ತುಂಡು ಕಲ್ಲಂಗಡಿ ಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ರೋಗ ನಿವಾರಣೆಯಾಗುತ್ತದೆ.
ಒಂದು ಚಮಚ ಸೊಗಡೇ ಬಳ್ಳಿಯ ಪುಡಿಯನ್ನು ಒಂದು ಲೋಟ ಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಮೂತ್ರ ನಾಳಗಳಲ್ಲಿರುವ ಸೋಂಕು ನಿವಾರಣೆಯಾಗಿ ಉರಿಮೂತ್ರ ರೋಗ ವಾಸಿಯಾಗುತ್ತದೆ.
ಒಂದು ಲೋಟಕ್ಕೆ ಐದರಿಂದ ಆರು ಚಿಗುರಿನ ವಸಭಿ ಗಿಡದ ಎಲೆಗಳನ್ನು ರುಬ್ಬಿ ಕುಡಿಯುವುದು ಇದರಿಂದ ಯಾವುದೇ ಸೂಕ್ಷ್ಮಾಣು ಜೀವಿಗಳ ಅಪಾಯವನ್ನು ನಾವು ತಪ್ಪಿಸಬಹುದು ಮೂತ್ರ ಸಹ ಸರಾಗವಾಗಿ ಆಗುತ್ತದೆ.
👤👤👤👤👤👤👤👤👤👤👤👤👤👤
ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ ದಶ ಲಾಭಗಳು:
ನೀರು ನಿಮ್ಮ ಹೆಚ್ಚಿನೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗ ಬಲ್ಲದು. ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣ ಪಡಿಸ ಬಹುದು ಎಂದು ತಿಳಿದಿದೆಯಾ?
ಹೆಚ್ಚಿನ ರೋಗಗಳು ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿ ಇರಿಸಲು ಇದು ನೆರವಾಗಲಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಯೋಚನೆಯು ಮೊದಲು ಆರಂಭವಾಗಿದ್ದು ಜಪಾನ್ ನಲ್ಲಿ. ಜಪಾನಿನಲ್ಲಿ ಜನರು ಹಲ್ಲುಜ್ಜುವ ಮೊದಲು ನಾಲ್ಕು ಲೋಟ ನೀರು ಕುಡಿದು ಇದರ ಬಳಿಕ ಅವರು ಅರ್ಧ ಗಂಟೆ ಏನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಈ ನೀರಿನ ಥೆರಪಿ ನಿಮ್ಮನ್ನು ಆರೋಗ್ಯಕರ ಹಾಗೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
ಜಪಾನ್ ನ ಜನರು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಟುವಟಿಕೆ ಹಾಗೂ ದಕ್ಷತೆಯನ್ನು ಹೊಂದಿರುವರೆಂಬ ಹೆಗ್ಗಳಿಕೆಯಿದೆ.
ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀರು ಜಾದು ಮಾಡ ಬಲ್ಲದು. ನೀವು ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ನೀವು ತಿಂದ ಆಹಾರದಲ್ಲಿರುವ ಎಣ್ಣೆ ಕೊಬ್ಬಾಗಿ ಪರಿವರ್ತಿತವಾಗುವುದಿಲ್ಲ. ಬೆಳಗ್ಗಿನ ಅವಧಿಯಲ್ಲಿ ಬಿಸಿನೀರು ಕುಡಿಯಲು ಪ್ರಯತ್ನಿಸಿ. ಬೆಳಗ್ಗಿನ ವೇಳೆ ಬಿಸಿ ನೀರು ಕುಡಿದರೆ ಆಗುವ ಅದ್ಭುತ ಆರೋಗ್ಯ ಲಾಭಗಳು ಇಲ್ಲಿವೆ:
🔹 ಕರುಳಿನ ಕ್ರಿಯೆ ಸರಾಗ: ಬೆಳಗ್ಗೆ ಎದ್ದು ನೀವು ನೀರು ಕುಡಿದ ಕೂಡಲೇ ಮಲ ವಿಸರ್ಜನೆ ಮಾಡುವ ಅಗತ್ಯತೆ ಕಾಣಿಸುತ್ತದೆ. ಇದರಿಂದ ನಿಮ್ಮ ಕರುಳಿನ ಕ್ರಿಯೆಯು ಸದಾ ನಿಯಮಿತವಾಗುತ್ತದೆ. ನೀವು ಪ್ರತೀ ಸಲ ಮಲ ವಿಸರ್ಜನೆ ಮಾಡಿದಾಗ ದೇಹವು ತ್ಯಾಜ್ಯದಿಂದ ಮುಕ್ತಿ ಪಡೆಯುತ್ತದೆ.
🔹ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ: ಪ್ರತೀ ದಿನ ನಾವು ಆಹಾರ ಅಥವಾ ಉಸಿರಾಟದ ಮೂಲಕ ಸೇವನೆ ಮಾಡುವಂತಹ ವಿಷಕಾರಿ ಅಂಶಗಳನ್ನು ನೀರು ಹೊರ ಹಾಕುತ್ತದೆ. ನೀವು ನೀರು ಕುಡಿದು ಮೂತ್ರ ವಿಸರ್ಜನೆ ಮಾಡಿದಾಗ ದೇಹದಲ್ಲಿನ ವಿಷಕಾರಿ ಅಂಶ ಹೊರ ಹೋಗುತ್ತದೆ.
🔹ಹಸಿವು ಹೆಚ್ಚಿಸುತ್ತದೆ: ಆಗಾಗ ನಾವು ನೀರು ಕುಡಿಯುವುದರಿಂದ ಮತ್ತು ನಿಮ್ಮ ಕರುಳನ್ನು ಸ್ವಚ್ಛಗೊಳಿಸುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ. ಬೆಳಗ್ಗೆ ಬೇಗನೆ ಹಸಿವಾಗುತ್ತದೆ ಮತ್ತು ಇದರಿಂದ ಸರಿಯಾಗಿ ಉಪಹಾರ ಮಾಡ ಬಹುದು.
🔹ತಲೆನೋವು ನಿವಾರಿಸುತ್ತದೆ: ನಮಗೆ ನಿರ್ಜಲೀಕರಣದಿಂದಾಗಿ ಹೆಚ್ಚಿನ ಸಲ ತಲೆನೋವು ಕಾಣಿಸಿ ಕೊಳ್ಳುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಿಡ ಬಹುದು.
🔹 ಕರುಳನ್ನು ಸ್ವಚ್ಛಗೊಳಿಸುತ್ತದೆ: ಕರುಳಿನಲ್ಲಿ ಸಂಗ್ರಹವಾಗಿರುವ ಜಿಡ್ಡನ್ನು ನೀರು ಸ್ವಚ್ಛಗೊಳಿಸುತ್ತದೆ. ಇದರಿಂದ ದೇಹವು ಪೌಷ್ಠಿಕಾಂಶಗಳನ್ನು ಬೇಗನೆ ಹೀರಿ ಕೊಳ್ಳಲು ನೆರವಾಗುತ್ತದೆ.
🔹ಚಯಾಪಚಯ ಕ್ರಿಯೆಗೆ ವೇಗ : ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಸುಮಾರು ಶೇ.24ರಷ್ಟು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆಹಾರವು ಬೇಗನೆ ಜೀರ್ಣವಾಗಿ, ಆಹಾರ ಸಮೀಕರಿಸಿ ತೂಕ ಕಳೆದು ಕೊಳ್ಳಲು ನೆರವಾಗುತ್ತದೆ.
🔹ರಕ್ತ ಕಣಗಳ ಸೃಷ್ಟಿ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹವು ಕೆಂಪುರಕ್ತದ ಕಣಗಳನ್ನು ವೇಗವಾಗಿ ಉತ್ಪತ್ತಿ ಮಾಡಲು ನೆರವಾಗುತ್ತದೆ. ಇದು ಆಮ್ಲಯುಕ್ತ ರಕ್ತವಾಗಿರುವ ಕಾರಣ ನಿಮ್ಮ ಹೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ.
🔹 ತೂಕ ಕಳೆದು ಕೊಳ್ಳಲು: ನೀವು ತೂಕ ಕಳೆದು ಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಗ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಇದರಿಂದ ನೀವು ವಿಷಕಾರಿ ಟ್ರಾನ್ಸ್ ಫ್ಯಾಟ್ಸ್ ನ್ನು ಹೊರ ಹಾಕಲು ನೆರವಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬಿನ ಚಯಾಪಚಯ ಕ್ರಿಯೆಯ ಮಟ್ಟ ಹೆಚ್ಚುತ್ತದೆ.
🔹ಹೊಳೆಯುವ ತ್ವಚ್ಛೆಗೆ: ನಿಮ್ಮ ಕರುಳಿನ ಕ್ರಿಯೆ ಸರಿಯಾಗಿ ಇರದ ಸಂದರ್ಭದಲ್ಲಿ ಮೊಡವೆ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ನಿಮ್ಮ ಕರುಳಿನ ಕ್ರಿಯೆ ನಿಯಮಿತವಾಗಿದ್ದರೆ ನಿಮ್ಮ ಮುಖದಲ್ಲಿ ಮೊಡವೆಗಳು ಕಡಿಮೆಯಿರುತ್ತದೆ.
🔹ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದು ಕೊಳ್ಳಲು ನೀರು ತುಂಬಾ ಮುಖ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದಾಗ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ....
👤👤👤👤👤👤👤👤👥👥👥👥👥👥
ಗ೦ಟಲಿನ ಕಫ ಹೊರ ಹಾಕಲು
ಪರಿಣಾಮ ಕಾರಿ ವಿದಾನ
ನಮಗೆ ಶೀತ ಆದಾಗ ಅಥವಾ ನಮ್ಮ ಉಸಿರಾಟದ ನಾಳದ ಮೇಲ್ಭಾಗದಲ್ಲಿ ಸೋಂಕು ಉಂಟಾದಾಗ, ಕಫ ಉಂಟಾಗುವುದು ಸಾಮಾನ್ಯ. ಇದು ಜೀವಕ್ಕೆ ಕುತ್ತು ತರುವಂತದಲ್ಲ ಎಂದರೂ ಇದನ್ನು ಸರಿಯಾದ ಸಮಯಕ್ಕೆ ತೊಲಗಿಸದಿದ್ದರೆ ಅದು ನಿಮ್ಮ ಶ್ವಾಸಕೋಶದ ನಳಿಕೆಗಳಿಗೆ ತಡೆಯೊಡ್ಡಿ, ಉಸಿರಾಟದ ನಾಳದ ಮೇಲ್ಭಾಗದಲ್ಲಿ ಎರಡನೆಯ ಸೋಂಕು ಹುಟ್ಟು ಹಾಕಬಹದು.
ಇಂದು ಈ ಲೇಖನದಲ್ಲಿ ನಾನು ನಿಮಗೆ ಗಂಟಲಿನ ಕಫವನ್ನು ಹೊರಹಾಕಲು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನಗಳು ಯಾವುಗಳೆಂದು ತಿಳಿಸುತ್ತೇನೆ ಓದಿರಿ.
1. ಉಪ್ಪು ನೀರು
ಒಂದು ಲೋಟದಷ್ಟು ಉಗುರುಬೆಚ್ಚಗಿನ ನೀರಿಗೆ ಕಾಲು ಚಮಚದಷ್ಟು ಉಪ್ಪು ಬೆರೆಸಿ. ಈ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದನ್ನು ದಿನಕ್ಕೆ ಹಲವಾರು ಬಾರಿ ಮಾಡಬೇಕು. ಉಪ್ಪಿಗೆ ಬ್ಯಾಕ್ಟೀರಿಯಾಗಳನ್ನೂ ಕೊಳ್ಳುವ ಸಾಮರ್ಥ್ಯ ಇದ್ದು ಇದು ಸೋಂಕನ್ನು ತಡೆಗಟ್ಟಿ ಕಫ ಹೆಚ್ಚಾಗುವುದನ್ನು ತಡೆಯುತ್ತದೆ.
2. ಶುಂಠಿ
ಶುಂಠಿಯು ಒಂದು ನೈಸರ್ಗಿಕ ಆಂಟಿಹಿಸ್ಟಾಮೈನ್ ಮತ್ತು ಮೂಗುಕಟ್ಟುವುದರ ನಿವಾರಕ. ಅಲ್ಲದೆ ಇದರಲ್ಲಿ ಶಗೋಲ್ ಎಂಬ ಪದಾರ್ಥವಿದ್ದು ಇದು ಶೀತ ಉಂಟುಮಾಡುವ ವೈರಾಣುಗಳೊಂದಿಗೆ ಹೋರಾಡುತ್ತದೆ. ಶುಂಠಿಯ ವೈರಾಣು-ವಿರೋಧಿ ಮತ್ತು ಬ್ಯಾಕ್ಟೀರಿಯಾ-ವಿರೋಧಿ ಗುಣಗಳೊಂದಿಗೆ, ಇದು ಉಸಿರಾಟವನ್ನು ಸುಲಭ ಕೂಡ ಮಾಡುತ್ತದೆ.
ಒಂದು ಶುಂಠಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ. ನಂತರ ಒಂದು ಚಮಚದಷ್ಟು ಶುಂಠಿಯ ತುಂಡುಗಳನ್ನು ಒಂದು ಲೋಟದಷ್ಟು ಬಿಸಿ ಬಿಸಿ ನೀರಿನಲ್ಲಿ ಹಾಕಿ. ಶುಂಠಿ ನೀರಿನೊಂದಿಗೆ ಬೆರೆಯಲು ಸ್ವಲ್ಪ ಹೊತ್ತು ಬಿಟ್ಟು, ನಂತರ ಅದಕ್ಕೆ ಎರಡು ಚಮಚದಷ್ಟು ಜೇನುತುಪ್ಪ ಬೆರೆಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಿಸಿ ದಿನಕ್ಕೆ ಮೂರ್ನಾಲ್ಕು ಬಾರಿ ಸೇವಿಸಿರಿ. ಪರ್ಯಾಯವಾಗಿ ನೀವು ಕೆಲವಷ್ಟು ಶುಂಠಿಯ ತುಂಡುಗಳನ್ನು ಹಾಗೆ ಬಾಯಲ್ಲಿ ಅಗಿಯಬಹುದು.
3. ಮೆಣಸಿನ ಪುಡಿ
ಮೆಣಸು ನಿಮ್ಮ ಗಂಟಲಿನಲ್ಲಿರುವ ಕಫವನ್ನು ಕಡಿಮೆ ಮಾಡಿ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಕೆಮ್ಮಿನಿಂದ ಉಂಟಾದ ಎದೆ ನೋವು ಮತ್ತು ಗಂಟಲು ಕೆರೆತವನ್ನೂ ಕಡಿಮೆ ಮಾಡುತ್ತದೆ.
ಮೊದಲಿಗೆ ಕಾಲು ಚಮಚದಷ್ಟು ಮೆಣಸಿನ ಪುಡಿ, ಕಾಲು ಚಮಚದಷ್ಟು ತುರಿದ ಶುಂಠಿ, ಒಂದು ಚಮಚದಷ್ಟು ಜೇನುತುಪ್ಪ – ಈ ಮೂರರ ಮಿಶ್ರಣ ಮಾಡಿ. ನಂತರ ಈ ಮಿಶ್ರಣಕ್ಕೆ ಎರಡು ಚಮಚದಷ್ಟು ನೀರನ್ನು ಬೆರೆಸಿ, ಕಲಿಸಿ. ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ಸೇವಿಸುವುದರಿಂದ ಕಫ ಕಡಿಮೆ ಆಗುತ್ತದೆ.
4. ನಿಂಬೆಹಣ್ಣು
ಕಫವನ್ನು ಮತ್ತು ಲೋಳೆಯನ್ನು ಹೋಗಲಾಡಿಸುವುದರಲ್ಲಿ ನಿಂಬೆಹಣ್ಣು ಬಹಳಷ್ಟು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ಕೇವಲ ಆಂಟಿ-ಬ್ಯಾಕ್ಟೀರಿಯಾ ಗುಣಗಳು ಇರುವದಷ್ಟೇ ಅಲ್ಲದೆ, ಅದರಲ್ಲಿರುವ ವಿಟಮಿನ್ C ನಿಮ್ಮ ದೇಹಕ್ಕೆ ಸೋಂಕಿನ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.
ಮೊದಲಿಗೆ ಎರಡು ಚಮಚದಷ್ಟು ನಿಂಬೆರಸವನ್ನು ಒಂದು ಚಮಚದಷ್ಟು ಜೇನುತುಪ್ಪ ಮತ್ತು ಒಂದು ಲೋಟದಷ್ಟು ಕುದಿಸಿದ ನೀರಿಗೆ ಬೆರೆಸಿ. ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿ. ಇನ್ನೊಂದು ವಿಧಾನ ಎಂದರೆ ನಿಂಬೆಹಣ್ಣನು ಕೇವಲ ಎರಡು ಭಾಗ ಮಾಡಿ. ಒಂದು ತುಂಡಿನ ಮೇಲೆ ಮೆಣಸಿನ ಪುಡಿ ಮತ್ತು ಉಪ್ಪನ್ನು ಉದುರಿಸಿ, ಅದನ್ನು ಚೀಪಿ.
5. ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ-ವಿರೋಧಿ, ವೈರಾಣು-ವಿರೋಧಿ ಮತ್ತು ಉರಿತ-ವಿರೋಧಿ ಗುಣಗಳಿದ್ದು ಇದು ಉಸಿರಾಟದ ನಾಳದ ಉರಿಯೂತವನ್ನು ಕಡಿಮೆ ಮಾಡುತ್ತದೆ. ನೀವು ಕಫವನ್ನು ನಿರ್ಮೂಲನೆ ಮಾಡಲು ಬೆಳ್ಳುಳ್ಳಿ ಚೆನ್ನಾಗಿ ಜೇಜ್ಜಿಕೊಳ್ಳಿ. ಈ ಜೇಜ್ಜಿದ ಬೆಳ್ಳುಳ್ಳಿಯ ಎಸಳುಗಳನ್ನು ಬೆಳಗ್ಗೆ ಎದ್ದೊಡನೆ ಮತ್ತು ಮಲಗುವ ಮುನ್ನ ನೀರಿನೊಂದಿಗೆ ಸೇವಿಸಿ.
ನಿಮ್ಮ ಮೂಗಿನಲ್ಲಿ ಕಟ್ಟಿಕೊಂಡಿರುವ ಲೋಳೆಯನ್ನು ಹೋಗಲಾಡಿಸಬೇಕೆಂದರೆ ಬೆಳ್ಳುಳ್ಳಿಯನ್ನು ಹಿಂಡಿ ಅದರ ರಸ ತೆಗಿಯಿರಿ. ನಂತರ ಈ ಬೆಳ್ಳುಳ್ಳಿ ರಸವನ್ನು ಒಂದು ಲೋಟದಷ್ಟು ನೀರಿನೊಂದಿಗೆ ಬೆರೆಸಿ. ಈ ಮಿಶ್ರಣದ ಕೆಲವು ಹನಿಗಳನ್ನು ನಿಮ್ಮ ಮೂಗಿನೊಳಗೆ ಬಿಟ್ಟುಕೊಳ್ಳಿ. ಇದು ಕಟ್ಟಿಕೊಂಡಿರುವ ಲೋಳೆಯನ್ನು ನೀರು ಮಾಡಿ ಅದು ಆಚೆ ಬರುವಂತೆ ಮಾಡುತ್ತದೆ
👤👤👤👥👥👥👥👥👥👤👤👤👤👤
*ನಿದ್ದೆ ಕೆಡಿಸುವ ಹಲ್ಲು ನೋವಿಗೆ, ಪವರ್ ಫುಲ್ ಮನೆಮದ್ದು*
ಹಲ್ಲುನೋವು ಎದುರಾದರೆ ಇದನ್ನು ಅನುಭವಿಸಿದವರಿಗೇ ಇದರ ಕಷ್ಟ ಗೊತ್ತು. ಇದಕ್ಕೆ ಹಲವಾರು ಕಾರಣಗಳಿವೆ. ಹಲ್ಲುಗಳಲ್ಲಿ ಕುಳಿ, ಒಸಡುಗಳಲ್ಲಿ ಸೋಂಕು, ತೆರೆದಿರುವ ಹಲ್ಲಿನ ಬೇರು, ಸೀಳಿದ ಹಲ್ಲು, ಹಲ್ಲಿನ ಕುಳಿಯನ್ನು ತುಂಬಿದ್ದುದು ಸಡಿಲವಾಗಿರುವುದು, ದವಡೆಯ ಬೋನಿನಲ್ಲಿ ಸೋಂಕು ಇತ್ಯಾದಿಗಳು.
ಅತಿಯಾದ ಹಲ್ಲುನೋವಿಗೆ ಪ್ರಮುಖವಾಗಿ ಹಲ್ಲಿನ ಬುಡದಲ್ಲಿ ಆದ ಸೋಂಕು ಕಾರಣವಾಗಿದೆ. ಪಲ್ಪ್ ಎಂದು ಕರೆಯಲಾಗುವ ಈ ಭಾಗದಲ್ಲಿ ಅತಿ ಹೆಚ್ಚಿನ ನರಾಗ್ರಗಳಿದ್ದು ಇವು ಅತಿ ಸಂವೇದನಾಶೀಲವಾಗಿರುತ್ತವೆ. ಈ ಭಾಗದಲ್ಲಿ ಸೋಂಕು ಉಂಟಾಗಲು ಕೆಲವಾರು ಕಾರಣಗಳಿವೆ. ಈ ನೋವನ್ನು ಕಡಿಮೆಗೊಳಿಸಲು ಕೆಲವು ಮನೆಮದ್ದುಗಳಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ:
*ಉಪ್ಪು ಮತ್ತು ಕಾಳುಮೆಣಸು*
ಇವುಗಳಲ್ಲಿರುವ ಬ್ಯಾಕ್ಟ್ರೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ.
* ಒಂದು ಬೋಗುಣಿಯಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ
* ಈ ಲೇಪನವನ್ನು ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಉಗಿಯಿರಿ.
* ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.
*ಬೆಳ್ಳುಳ್ಳಿ*
ಇದರ ಪ್ರತಿಜೀವಕ ಮತ್ತು ಔಷಧೀಯ ಗುಣಗಳು ಹಲ್ಲುನೋವನ್ನು ಕಡಿಮೆಗೊಳಿಸಲು ಶಕ್ತವಾಗಿವೆ.
* ಹಸಿ ಬೆಳ್ಳುಳ್ಳಿ ಜಜ್ಜಿ ಅಥವಾ ಪುಡಿಯನ್ನು ಉಪಯೋಗಿಸಿ ಕೊಂಚ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಕೊಂಚ ನೀರು ಸೇರಿಸಿ ದಪ್ಪನೆಯ ಲೇಪನವನ್ನಾಗಿಸಿ.
* ಈ ಲೇಪನವನ್ನು ಬಾಧಿತ ಹಲ್ಲಿನ ಮೇಲೆ ಇರಿಸಿ. ಸಾಧ್ಯವಾದರೆ ಹಸಿ ಬೆಳ್ಳುಳ್ಳಿಯ ಎಸಳನ್ನು ಬಾಧಿತ ಹಲ್ಲಿನ ಮೇಲೆ ಇಟ್ಟು ಜಗಿಯಿರಿ.
* ಈ ವಿಧಾನವನ್ನು ದಿನಕ್ಕೆರಡು ಬಾರಿಯಂತೆ ಕೆಲವು ದಿನ ಅನುಸರಿಸಿ.
*ಲವಂಗ*
ಲವಂಗದ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ, ಆಂಟಿ ಆಕ್ಸಿಡೆಂಟು ಮತ್ತು ಅರವಳಿಕೆ ನೀಡುವ ಗುಣಗಳು ಹಲ್ಲುನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಅದರಲ್ಲೂ ಸೋಂಕು ಉಂಟಾಗಿ ನೋವಾಗುತ್ತಿದ್ದರೆ ಈ ವಿಧಾನ ಸೂಕ್ತವಾಗಿದೆ.
* ಎರಡು ಲವಂಗಗಳನ್ನು ನುಣ್ಣಗೆ ಅರೆದು ಕೊಂಚ ಆಲಿವ್ ಎಣ್ಣೆ ಅಥವಾ ಬೇರಾವುದಾದರೂ ಅಡುಗೆ ಎಣ್ಣೆ ಬೆರೆಸಿ ಸೋಂಕು ತಗುಲಿದ ಭಾಗಕ್ಕೆ ಹಚ್ಚಿ
* ಪರ್ಯಾಯವಾಗಿ ಹತ್ತಿಯುಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ನೋವಿರುವ ಭಾಗದಲ್ಲಿರಿಸಿ ಕಚ್ಚಿಕೊಳ್ಳಿ.
* ಇನ್ನೊಂದು ವಿಧಾನದಲ್ಲಿ ಕೊಂಚ ಬಿಸಿನೀರಿಗೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ ಮುಕ್ಕಳಿಸಿ.
*ಈರುಳ್ಳಿ*
ಇದರ ಕೀಟಾಣುವಿರೋಧಿ ಮತ್ತು ನಂಜುನಿರೋಧಕ ಗುಣಗಳು ಹಲ್ಲುನೋವು ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಉತ್ತಮವಾಗಿದೆ.
ಹಸಿ ಈರುಳ್ಳಿಯನ್ನು ನೋವಿರುವ ಹಲ್ಲುಗಳ ಭಾಗದಲ್ಲಿ ಅಗಿಯಿರಿ. ಇಲ್ಲದಿದ್ದರೆ ಕೆಲವು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿ.
*ಉಗುರುಬೆಚ್ಚನೆಯ ಉಪ್ಪುನೀರು*
ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಚಮಚ ಉಪ್ಪು ಸೇರ್ಇಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುತ್ತಾ ಇರಿ. ಇದರಿಂದ ಸೋಂಕು ಉಂಟಾಗಿದ್ದ ಒಸಡಿನಲ್ಲಿರುವ ಬ್ಯಾಕ್ಟೀರಿಯಾಗಳು ತೊಲಗಿ ಸೋಂಕು ಹಾಗೂ ನೋವು ಕಡಿಮೆಯಾಗುತ್ತದೆ.
👤👤👤👤👤👤👤👤👤👤👤👤👤👤
ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ಏನಾಗುತ್ತದೆಂದು ಗೊತ್ತೆ…?
ಹಾಲು ಸಂಪೂರ್ಣ ಆಹಾರ. ನಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಗಳನ್ನು ಒದಗಿಸುತ್ತದೆ.ಬೆಲ್ಲವನ್ನು ಸಕ್ಕರಗೆ ಬದಲಿಯಾಗಿ ಉಪಯೋಗಿಸುತ್ತಾರೆ. ಬೆಲ್ಲದಿಂದ ಅನೇಕ ಸಿಹಿ ಪದಾರ್ಥಗಳನ್ನೂ ಮಾಡುತ್ತಾರೆ. ಸಕ್ಕರೆಗಿಂತ ಬೆಲ್ಲವನ್ನು ಸೇವಿಸುವುದರಿಂದ ಹೆಚ್ಚಿನ ಲಾಭವಿದೆ. ಬಿಸಿ ಬಿಸಿ ಹಾಲಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸಿದರೆ ಹೇಗಿರುತ್ತದೆಂದು ಗೊತ್ತೆ? ತುಂಬಾ ರುಚಿಕರವಾಗಿರುತ್ತದೆ…! ಕೆಲವರು ಹೀಗೆ ಬಿಸಿ ಹಾಲಿಗೆ ಬೆಲ್ಲವನ್ನು ಸೇರಿಸಿ ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಕೇವಲ ರುಚಿಕರವಾಗಿರುವುದೇ ಅಲ್ಲದೇ ಇತರೆ ಅನಾರೋಗ್ಯ ಸಮಸ್ಯೆಗಳು ಸಹ ನಿವಾರಣೆ ಆಗುತ್ತವೆ. ಈ ರೀತಿ ಕುಡಿಯುವುದರಿಂದ ನಮಗಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ
1.ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಸೇವಿಸುವುದರಿಂದ ಶರೀರದ ತೂಕ ಸಮತೋಲನದಲ್ಲಿರುತ್ತದೆ.
2. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಗ್ಯ ಏರು ಪೇರಾಗುತ್ತದೆ. ಶರೀರಕ್ಕೆ ಪೋಷಕಾಂಷಗಳು ಸೇರ್ಪಡೆಯಾಗುವುದಿಲ್ಲ. ಆದರೆ,ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.
3. ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸಿದರೆ, ಅದರಲ್ಲಿರುವ ಪೋಷಕಾಂಶಗಳಿಂದ ತಲೆ ಕೂದಲು ಹೊಳಪಾಗುತ್ತವೆ. ಕೂದಲು ಉದುರುವುದು ನಿಂತುಹೋಗುತ್ತದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.
4. ಮಹಿಳೆಯರಿಗೆ ಋತುಚಕ್ರದಲ್ಲಿ ಪೀಡಿಸುವ ವಿವಿಧ ಸಮಸ್ಯೆಗಳು,ಮುಖ್ಯವಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ.
5.ಬೆಲ್ಲ ಬೆರೆಸಿದ ಹಾಲಿಗೆ ಪ್ರಾಕೃತಿಕವಾದ ಆಂಟಿಬಯಾಟಿಕ್,ಆಂಟಿ ವೈರಲ್ ಗುಣಗಳಿರುತ್ತದೆ. ಆದುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಸೊಂಕುಗಳು ಕಡಿಮೆಯಾಗುತ್ತವೆ.
6. ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿ ಕೀಲು ನೋವುಗಳ ಸಮಸ್ಯೆಗೆ ಗುರಿಯಾಗುತ್ತಾರೆ. ಅಂತಹವರು ಪ್ರತಿದಿನ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ನೋವಿನಿಂದ ಉಪಶಮನ ಲಭಿಸುತ್ತದೆ ಮತ್ತು ಕೀಲುಗಳು ದೃಢವಾಗುತ್ತವೆ.
👤👤👤👤👤👤👤👤👤👤👤👤👤👤
ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಬೇಯಿಸಿಕೊಂಡು ಕುಡಿದರೆ ಏನಾಗುತ್ತದೆ ಗೊತ್ತಾ?
----------*****-----------
ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ.
1. ಹಾಲಿನಲ್ಲಿ ಬೆಳ್ಳಿಳ್ಳಿ ಎಸಳನ್ನು ಕುದಿಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಲಭಿಸುತ್ತವೆ. ಫ್ಲೇವನಾಡ್ಸ್, ಎಂಜೈಮ್ಗಳು, ಆಂಟಿ ಆಕ್ಸಿಡೆಂಟ್ಗಳು, ಮಿನರಲ್ಗಳು, ವಿಟಮಿನ್ಗಳು ಲಭ್ಯವಾಗುತ್ತವೆ. ವಿಟಮಿನ್ ಎ, ಬಿ1, ಬಿ2, ಬಿ6, ಸಿ ವಿಟಮಿನ್, ಪೊಟ್ಯಾಷಿಯಂ, ಪ್ರೋಟೀನ್, ಕಾಪರ್, ಮ್ಯಾಂಗನೀಸ್, ಫಾಸ್ಪರಸ್, ಜಿಂಕ್, ಸೆಲೇನಿಯಂ, ಕ್ಯಾಲ್ಸಿಯಂನಂತಹ ಅನೇಕ ಪೋಷಕಾಂಶಗಳು ಈ ಮಿಶ್ರಣದ ಮೂಲಕ ನಮಗೆ ದೊರೆಯುತ್ತವೆ.
2. ಜ್ವರ ಕಾರಣ ಪ್ಲೇಟ್ಲೆಟ್ಗಳು ಕಡಿಮೆಯಾಗುತ್ತಿರುವವರಿಗೆ ಇದು ಒಳ್ಳೆಯ ಔಷಧ. ಪ್ಲೇಟ್ಲೆಟ್ಗಳು ವೇಗವಾಗಿ ಹೆಚ್ಚಾಗುತ್ತವೆ. ಇನ್ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ.
3. ಕೆಟ್ಟ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಒಳ್ಳೆಯ ಕೊಲೆಸ್ಟಾರಾಲ್ ಹೆಚ್ಚಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ. ಅದೇನು ಇಲ್ಲದವರಿಗೆ ಭವಿಷ್ಯದಲ್ಲಿ ಬರುವುದಿಲ್ಲ.
4. ಹಲವು ವಿಧದ ಕ್ಯಾನ್ಸರ್ಗಳನ್ನು ಗುಣಪಡಿಸುವ ಶಕ್ತಿ ಈ ಮಿಶ್ರಣಕ್ಕಿದೆ. ಆಂಟಿ ಆಕ್ಸಿಡೆಂಟ್ಗಳು ಹೆಚ್ಚಾಗಿ ಲಭ್ಯವಾಗುವ ಕಾಅಣ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ಕ್ಯಾನ್ಸರ್ ಕಣಗಳ ವೃದ್ಧಿ ಕಡಿಮೆಯಾಗುತ್ತದೆ.
5. ವಯಸ್ಸು ಹೆಚ್ಚಾದಂತೆ ಕಾಣಿಸಿಕೊಳ್ಳುವ ವೃದ್ದಾಪ್ಯ ಕುರುಹುಗಳು ಬರುವುದಿಲ್ಲ. ಆಂಟಿ ಏಜಿಂಗ್ ಲಕ್ಷಣಗಳು ಧಾರಾಳವಾಗಿ ಇರುವ ಕಾರಣ, ಯೌವ್ವನವಾಗಿ ಕಾಣಿಸುತ್ತಾರೆ.
6. ರಕ್ತದೊತ್ತಡ, ಮಧುಮೇಹ ಹಿಡಿತದಲ್ಲಿರುತ್ತದೆ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಲಿವರ್ ಶುದ್ಧವಾಗುತ್ತದೆ.
7. ಗಾಯಗಳಾಗಿರುವವರು ಈ ಮಿಶ್ರಣವನ್ನು ಕುಡಿದರೆ ಅವು ಶೀಘ್ರದಲ್ಲಿ ಗುಣಮುಖವಾಗುವ ಸಾಧ್ಯತೆಗಳಿವೆ. ಏಕೆಂದರೆ ಈ ಮಿಶ್ರಣದಲ್ಲಿ ಎರಡು ಪಟ್ಟು ಆಂಟಿ ಬಯೋಟಿಕ್ ಲಕ್ಷಣಗಳಿರುತ್ತವೆ.
8. ರಕ್ತ ಗಡ್ಡೆ ಕಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ.
9. ಚಯಾಪಚಯ ಪ್ರಕ್ರಿಯೆ ಚುರುಕಾಗುತ್ತದೆ. ಅಧಿಕ ತೂಕ ಇರುವವರಿಗೆ ತೂಕ ಕಡಿಮೆಯಾಗುತ್ತಾರೆ.
10. ಕೆಮ್ಮು, ಜ್ವರದಂತಹ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಗುಣವಾಗುತ್ತವೆ. ದಂತ ಸಂಬಂಧಿ ಸಮಸ್ಯೆಗಳು ಇದ್ದರೆ ದೂರವಾಗುತ್ತವೆ.
11. ಚರ್ಮಕ್ಕೆ ಆಗಿರುವ ಫಂಗಸ್ ಇನ್ಫೆಕ್ಷನ್ ಗುಣವಾಗುತ್ತದೆ. ಚರ್ಮ ಸೌಂದರ್ಯ ಉತ್ತಮಗೊಳ್ಳುತ್ತದೆ. ಮೊಡವೆಗಳು ಬರುವುದಿಲ್ಲ.
12. ಮೂಳೆಗಳು ದೃಢವಾಗುತ್ತವೆ. ಮೂಳೆ ಮುರಿದವರಿಗೆ ಈ ಮಿಶ್ರಣ ಕುಡಿಸಿದರೆ ಅವು ಕೂಡಿಕೊಳ್ಳುವ ಅವಕಾಶ ಇದೆ.
------------****---------
👤👤👤👤👤👤👤👤👤👤👤👤👤👤👤
*ಮಜ್ಜಿಗೆ ಮಹಿಮೆ* -ಉಪಯುಕ್ತ ಮಾಹಿತಿ-
(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?
ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ. ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆ.
ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.
*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.
*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆ
ಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.
*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.
*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.
*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.
*ಜಠರ ವಿಕಾರಗಳಿಗೆ ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.
*ಕ್ಷಾರ ಹಾಗೂ ಕಷಾಯ ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.
*ಲಿವರ್ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.
*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.
*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.
*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.
*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.
*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.
*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.
*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.
*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕುಡಿಯಿರಿ ಗೊತ್ತಿಲ್ಲಾದವರಿಗೆ ತಿಳಿಸಿಕೊಡಿ...
👤👤👤👤👤👤👤👤👤👤👤👤👤👤👤
ಹೃದಯಾಘಾತವಾದಾಗ ತಕ್ಷಣ ಏನು ಮಾಡಬೇಕು..... ?
ನೀವು ಒಬ್ಬರೇ ಇರುತ್ತೀರಿ..!!
ಎದೆಯ ಎಡಭಾಗದಲ್ಲಿ ಎದೆ ಭಾರವಾದಂತಹ., ಬಿಗಿ ಹಿಡಿದಂತಹ ನೋವು ಕಾಣಿಸಿಕೊಂಡು ಬೆವರಲು ಪ್ರಾರಂಭಿಸುತ್ತಿರಿ.......
ಕಣ್ಣುಗಳು ಮಂಜಾಗುತ್ತವೆ....
ಎಲ್ಲೋ ಪಾತಾಳಕ್ಕೆ ಕುಸಿದಂತಹ ಅನುಭವ..........
ಆಸ್ಪತ್ರೆ ದೂರವಿರುತ್ತದೆ., ಮೊಬೈಲ್ ಅಥವಾ 108 ಕ್ಕೆ ಕರೆಕೊಟ್ಟರೂ ಅವರು ಬರುವುದು ಕೆಲ ನಿಮಿಷಗಳಾಗಬವುದು.., ನಿಮ್ಮ ಜ್ಞಾನ ಹೋಗಲು ಇನ್ನೇನು ಕೆಲ ಸೆಕೆಂಡುಗಳಿವೆ....
60% ಜನ ಹೃದಯ ಆಘಾತವಾದಾಗ ಮರಣ ಹೊಂದುವ ಸಂಭವವೇ ಹೆಚ್ಚು....
ಅಂತಹ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡಬೇಕು....?
1. ಪದೇ ಪದೇ ಜೊರಾಗಿ ಕೆಮ್ಮ ಬೇಕು......!!
2. ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಇಲ್ಲವೇ ಅಂಗಾತ ಮಲಗಿಕೊಳ್ಳಬೇಕು...!!
3. ಧಿರ್ಘವಾಗಿ ಉಸಿರು ಎಳೆದುಕೊಳ್ಳುವುದು ಮತ್ತು ಜೋರಾಗಿ ಕೆಮ್ಮುವುದನ್ನು ಮಾಡಬೇಕು....!! ( ಕಫ ತೆಗೆಯುವ ರೀತಿ)
4. ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮುತ್ತಿರಬೇಕು.....!!
5. ಸಹಾಯಕ್ಕಾಗಿ ಯಾರಾದರು ಬರುವವರೆಗೆ ಸಾಮಾನ್ಯ ಸ್ಥಿತಿಗೆ ಬರುವವರೆಗೂ ಇದನ್ನು ಮುಂದುವರೆಸುತ್ತಿರಬೇಕು.....!!
ಇದರಿಂದ ನಾವು ಹೃದಯಾಘಾತದಿಂದ ಸಾಯದೆ ಬದುಕುಳಿಯುವ ಸಂಭವ ಹೆಚ್ಚು..
ಯಾವ ರೀತಿ ಅನುಕೂಲವಾಗುತ್ತದೆ....?
ದೀರ್ಘವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಮ್ಲಜನಕ (ಆಕ್ಸಿಜನ್) ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ....
ಇದನ್ನೆ ಆಸ್ಪತ್ರೆಯಲ್ಲಿ
ಐ.ಸಿ.ಯು.ನಲ್ಲಿ ಮಾಡುವುದು...
ಜೋರಾಗಿ ಕೆಮ್ಮುವುದರಿಂದk ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಸರಾಗವಾಗಿ ಹರಿಯುತ್ತದೆ... ಜೊತೆಗೆ ಹೃದಯ ಬಡಿತವು ಸುಸ್ಥಿಗೆ ಬರುತ್ತದೆ... ಕಾರಣ ಅಂತಹ ಸಮಯದಲ್ಲಿ ಹೃದಯ ಸ್ತಂಭನವಾಗುವ ಸಂಭವ ಹೆಚ್ಚಿರುತ್ತದೆ.... ಸಹಾಯಕ್ಕೆ ಬರುವವರೆಗೂ ಇದನ್ನು ನಾವು ಮುಂದುವರಿಸಿದೇ ಆದಲ್ಲಿ ತಕ್ಷಣವೇ ಸಹಾಯವಾಗುತ್ತದೆ...
ಇದನ್ನು ಓದಿದವರು ಮತ್ತು ಕೇಳಿದವರು ಹತ್ತು ಜನರೊಂದಿಗೆ ಚರ್ಚಿಸಿ ಎಲ್ಲರಿಗೂ ತಿಳಿಯುವಂತೆ ಮಾಡಿದರೆ ಎಷ್ಟೋ ಪ್ರಾಣಗಳಗಳನ್ನು ಉಳಿಸಬಹುದು.....!!
👤👤👤👤👤👥👥👥👥👥👥👤👤👤
ಬಾಣಂತಿಯು ತಿನ್ನುವ ಆಹಾರದಲ್ಲಿ ಕಡಿಮೆ ಕ್ಯಾಲೋರಿ ಇರಬೇಕು. ಹೆಚ್ಚು ನಾರಿನಂಶ ಇರಬೇಕು. ಕಾಳುಗಳ ಸೇವನೆ ಕೂಡ ಅವಶ್ಯ. ಬೇಯಿಸಿದ ತರಕಾರಿ ತಿನ್ನುವುದರಿಂದ ಬೇಗನೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ದೇಹಕ್ಕೆ ಅವಶ್ಯವಾದ ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ಅಂಶಗಳು ದೊರಕುತ್ತವೆ. ಮೀನು, ಬೇಳೆಕಾಳು, ಮೊಳಕೆಕಾಳು ಹಾಗೂ ಮೊಟ್ಟೆ ಸೇವಿಸಬೇಕು.
ಈ ಕೆಳಗಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
* ಮಗುವಿನ ತಾಯಿಗೆ ಹೆರಿಗೆಯ ನಂತರ ಸಾಕಷ್ಟು ಎನರ್ಜಿಯ ಅಗತ್ಯವಿದೆ. ಹಾಲಿನಿಂದ ಮಾಡಿದ ಆಯ್ದ ತಿನಿಸುಗಳನ್ನು ತಿನ್ನಬಹುದು. ಡ್ರೈ ಪ್ರೂಟ್ ಮಿಲ್ಕ್ ಶೇಕ್ ಕುಡಿಯಬಹುದು.
* ಪಾಲಿಶ್ ಮಾಡಿಲ್ಲದ ಅಕ್ಕಿಯಿಂದ ತಯಾರಿಸಿದ ಇಡ್ಲಿ, ದೋಸಾ ಹಾಗೂ ಬ್ರೆಡ್ ಸ್ಯಾಂಡ್ವಿಚ್ಗಳನ್ನು ಸೇವಿಸಬಹುದು. ಆ್ಯಂಟಿ ಆಕ್ಸಿಡೆಂಟ್ ಇರುವ ಹಣ್ಣಿನ ರಸಗಳನ್ನು ತಿಂಡಿಯೊಂದಿಗೆ ಸೇವಿಸಬಹುದು.
* ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ನಡುವೆ ಒಂದು ಕಪ್ ಗ್ರೀನ್ ಟೀಯನ್ನು ಸೇವಿಸಬಹುದು. ಇದು ದೇಹ ಹಾಗೂ ಮನಸ್ಸನ್ನು ರಿಫ್ರೆಶ್ಗೊಳಿಸುತ್ತದೆ.
* ಬಿಸಿನೀರಿನ ಸ್ನಾನದ ನಂತರ ಬಿಸಿ ಜೀರಿಗೆ ನೀರು ಇಲ್ಲವೇ ಮೆಣಸಿನ ರಸಂ ನಲ್ಲಿ ಅನ್ನವನ್ನು ತಿನ್ನಬಹುದು. ಮಜ್ಜಿಗೆ ಅನ್ನ ಹಾಗೂ ಸಲಾಡ್ಗಳು ಎನರ್ಜಿಯನ್ನು ಹೆಚ್ಚಿಸುತ್ತವೆ.
*ಮಗುವಾದ 8 ನೇ ವಾರದ ನಂತರ ವಾಕಿಂಗ್ ಆರಂಭಿಸಬಹುದು. ನಿಧಾನವಾಗಿ ನಡೆಯಬೇಕು. ಮೊದಲಿಗೆ 20 ನಿಮಿಷ ವಾಕಿಂಗ್ ಮಾಡುತ್ತಾ ಬರಬರುತ್ತಾ 30 ನಿಮಿಷದವರೆಗೂ ಮುಂದುವರಿಸಿ.
* ಮಗುವಿನ ಆರೈಕೆಯಲ್ಲೆ ಸಮಯ ಕಳೆದು ಹೋದಲ್ಲಿ, ಮಗು ನಿದ್ರಿಸುವಾಗ ಮುಂದುವರಿಸಿ.
* ಮನೆಯಲ್ಲೆ ನೀವು ವ್ಯಾಯಾಮ ಆರಂಭಿಸಬಹುದು. ಶೋ ಧರಿಸಿ, ಸ್ಪಾಟ್ ವಾಕಿಂಗ್ ಹಾಗೂ ಮೆಟ್ಟಿಲುಗಳನ್ನು ಹತ್ತಿ ಇಳಿಯುವ ವ್ಯಾಯಾಮ ಮಾಡಬಹುದು.
* ಸಂಜೆ ವಾಕಿಂಗ್ ಮಾಡಿದ ನಂತರ ಎಳನೀರು, ಕ್ಯಾರೆಟ್ ಜ್ಯೂಸ್, ಕಲ್ಲಂಗಡಿ ಹಣ್ಣು, ಸೌತೆಕಾಯಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು. ಇದು ದೇಹದಲ್ಲಿನ ನೀರಿನಂಶವನ್ನು ಬ್ಯಾಲೆನ್ಸ್ ಮಾಡುತ್ತದೆ.
* ನೀರು ಎಷ್ಟು ಕುಡಿಯುವ ಅಭ್ಯಾಸ ಇರುವುದೋ ಅಷ್ಟು ಉತ್ತಮ.
* ರಾತ್ರಿಯೂಟ ಆದಷ್ಟೂ ಸ್ವಲ್ಪವಿರಬೇಕು. ಸೂಪ್, ಕೊಂಚ ತುಪ್ಪ ಹಾಗೂ ಬಿಸಿ ಅನ್ನ, ಒಂದಿಷ್ಟು ಸೊಪ್ಪು, ಮೊಸರು ಹೊಂದಿರಬೇಕು.
👤👤👤👤👤👤👤👤👤👤👤👤👤👥👤👤👤
ರೋಗ ನಿರೋಧಕ ಶಕ್ತಿ
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಏಕೆಂದರೆ, ಅವರ ದೇಹವಿನ್ನೂ ಹೊರಗಿನಿಂದ ದಾಳಿ ಇಡುವ ವೈರಾಣುಗಳನ್ನು ನಿಗ್ರಹಿಸುವ, ಹೋರಾಡುವ ಸಾಮರ್ಥ್ಯವನ್ನು ಪಡೆದುಕೊಂಡಿರುವುದಿಲ್ಲ. ಹಾಗಾಗಿಯೇ ಮಕ್ಕಳು ಬೇಗ ರೋಗಗಳಿಗೆ ತುತ್ತಾಗುತ್ತಾರೆ. ಹಾಗಾಗಿ, ಪೋಷಕರು ತಮ್ಮ ಮಕ್ಕಳಿಗೆ ಮೂಗಿಗೆ ಸಂಬಂಧಿಸಿದ ಸಮಸ್ಯೆ, ಜ್ವರ ಹಾಗೂ ಎಳೆವೆಯಲ್ಲಿ ಸಾಮಾನ್ಯವಾಗಿ ಕಾಡುವ ಅನಾರೋಗ್ಯ ಮೊದಲಾದವು ಬಾರದಂತೆ ಮುಂಚಿತವಾಗಿಯೇ ತಡೆಯೊಡ್ಡಬೇಕಿದೆ.
ಅದರಲ್ಲೂ 5 ವರ್ಷಕ್ಕಿಂತ ಚಿಕ್ಕ ಪ್ರಾಯದ ಮಕ್ಕಳು ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವುದರಿಂದ ಅಂತಹ ಕಂದಮ್ಮಗಳ ಆರೋಗ್ಯ ಕಾಪಾಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅದಕ್ಕಾಗಿ ಮಕ್ಕಳ ವೈದ್ಯರಲ್ಲಿಗೆ ಮಗುವನ್ನು ಕಾಲಕಾಲಕ್ಕೆ ಕರೆದೊಯ್ದು ಅತ್ಯಗತ್ಯ ಚುಚ್ಚುಮದ್ದುಗಳನ್ನು ಕೊಡಿಸುವ ಮೂಲಕ ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಹೆಚ್ಚಿಸಬೇಕು.
ಶ್ವಾಸಕೋಶದ ಉರಿಯೂತ(ನ್ಯುಮೋನಿಯ), ಅತಿಸಾರ(ಡಯೇರಿಯ), ಟೈಫಾಯ್ಡ್(ವಿಷಮಶೀತ ಜ್ವರ), ಜರ್ಮನ್ ಮೀಸಲ್ಸ್(ದಡಾರ), ಮೆನೆಂಜೈಟಿಸ್, ಚಿಕನ್ಪಾಕ್ಸ್, ಟೆಟನಸ್(ಧನುರ್ವಾಯು), ಮಂಪ್ಸ್, ಪೋಲಿಯೋ, ಡಿಪ್ತೀರಿಯ, ರೊಟವೈರಸ್, ಹೆಪಟೈಟಿಸ್, ರುಬೆಲ್ಲಾ, ಇನ್ಫ್ಲುಯೆಂಜಾ ಮೊದಲಾದ ರೋಗಗಳು ಬಾರದಂತೆ ಅಗತ್ಯವಾದ ಚುಚ್ಚುಮದ್ದು ಹಾಕಿಸುವುದು ಅತ್ಯಗತ್ಯ.
👤👤👤👤👤👤👤👤👤👥👤👤👤👤
ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ :
ಅಂಗೈಯಲ್ಲಿ ಆರೋಗ್ಯ
♦ *ಬಿಕ್ಕಳಿಕೆ ಬರುವುದೇ :* ಹುರುಳಿ ಕಷಾಯ ಸೇವಿಸಿರಿ.
♦ *ಕಫ ಬರುವುದೇ :* ಶುಂಠಿ ಕಷಾಯ ಸೇವಿಸಿರಿ.
♦ *ಹೊಟ್ಟೆಯಲ್ಲಿ ಹರಳಾದರೇ :* ಬಾಳೆದಿಂಡಿನ ಪಲ್ಯ ಸೇವಿಸಿರಿ.
♦ *ಬಿಳಿ ಕೂದಲೇ :* ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
♦ *ಮರೆವು ಬರುವುದೇ :* ನಿತ್ಯ ಸೇವಿಸಿ ಜೇನು.
♦ *ಕೋಪ ಬರುವುದೇ :* ಕಾಳು ಮೆಣಸು ಸೇವಿಸಿ.
♦ *ಮೂಲವ್ಯಾಧಿಯೇ :* ನಿತ್ಯ ಸೇವಿಸಿ ಎಳ್ಳು.
♦ *ಮುಪ್ಪು ಬೇಡವೇ :* ಗರಿಕೆ ರಸ ಸೇವಿಸಿ.
♦ *ನಿಶಕ್ತಿಯೇ :* ದೇಶಿ ಆಕಳ ಹಾಲು ಸೇವಿಸಿ.
♦ *ಇರುಳುಗಣ್ಣು ಇದೆಯೇ :* ತುಲಸಿ ರಸ ಕಣ್ಣಿಗೆ ಹಾಕಿ.
♦ *ಕುಳ್ಳಗಿರುವಿರೇ :* ನಿತ್ಯ ಸೇವಿಸಿ ನಿಂಬೆ ಹಣ್ಣು.
♦ *ತೆಳ್ಳಗಿರುವಿರೆ :* ನಿತ್ಯ ಸೇವಿಸಿ ಸೀತಾ ಫಲ.
♦ *ತೆಳ್ಳಗಾಗಬೇಕೇ :* ನಿತ್ಯ ಸೇವಿಸಿ ಬಿಸಿ ನೀರು.
♦ *ಹಸಿವಿಲ್ಲವೇ :* ನಿತ್ಯ ಸೇವಿಸಿ ಓಂ ಕಾಳು.
♦ *ತುಂಬಾ ಹಸಿವೇ :* ಸೇವಿಸಿ ಹಸಿ ಶೇಂಗಾ.
♦ *ಬಾಯಾರಿಕೆಯೇ :* ಸೇವಿಸಿ ತುಳಸಿ.
♦ *ಬಾಯಾರಿಕೆ ಇಲ್ಲವೇ :* ಸೇವಿಸಿ ಬೆಲ್ಲ.
♦ *ಸಕ್ಕರೆ ಕಾಯಿಲೆಯೇ :* ಬಿಡಿ ಸಕ್ಕರೆ, ಸೇವಿಸಿ ರಾಗಿ.
♦ *ರಕ್ತ ಹೀನತೆಯೇ :* ನಿತ್ಯ ಸೇವಿಸಿ ಪಾಲಕ್ ಸೊಪ್ಪು.
♦ *ತಲೆ ಸುತ್ತುವುದೇ :* ಬೆಳ್ಳುಳ್ಳಿ ಕಷಾಯ ಸೇವಿಸಿ.
♦ *ಬಂಜೆತನವೇ :* ಔದುಂಬರ ಚಕ್ಕೆ ಕಷಾಯ
♦ *ಸ್ವಪ್ನ ದೋಷವೇ :* ತುಳಸಿ ಕಷಾಯ ಸೇವಿಸಿ.
♦ *ಅಲರ್ಜಿ ಇದೆಯೇ :* ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಹೃದಯ ದೌರ್ಬಲವೇ :* ಸೋರೆಕಾಯಿ ರಸ ಸೇವಿಸಿ.
♦ *ರಕ್ತ ದೋಷವೇ :* ಕೇಸರಿ ಹಾಲು ಸೇವಿಸಿ.
♦ *ದುರ್ಗಂಧವೇ :* ಹೆಸರು ಹಿಟ್ಟು ಸ್ನಾನ ಮಾಡಿ.
♦ *ಕೋಳಿ ಜ್ವರಕ್ಕೆ :* ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಕಾಲಲ್ಲಿ ಆಣಿ ಇದೆಯೇ :* ಉತ್ತರಾಣಿ ಸೊಪ್ಪು ಕಟ್ಟಿರಿ.
♦ *ಮೊಣಕಾಲು ನೋವು :* ನಿತ್ಯ ಮಾಡಿ ವಜ್ರಾಸನ.
♦ *ಸಂಕಟ ಆಗುವುದೇ :* ಎಳನೀರು ಸೇವಿಸಿ.
♦ *ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ :* ನಿತ್ಯ ಕೊಡಿ ಜೇನು.
♦ *ಜಲ ಶುದ್ಧಿ : ಮಾಡಬೇಕೇ :* ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.
♦ *ವಾಂತಿಯಾಗುವುದೇ :* ಎಳನೀರು-ಜೇನು ಸೇವಿಸಿ.
♦ *ಭೇದಿ ತುಂಬಾ ಆಗುವುದೇ :* ಅನ್ನ ಮಜ್ಜಿಗೆ ಊಟ ಮಾಡಿ.
♦ *ಹಲ್ಲು ಸಡಿಲವೇ :* ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
♦ *ಕಾಮಾಲೆ ರೋಗವೇ :* ನಿತ್ಯ ಮೊಸರು ಸೇವಿಸಿ.
♦ *ಉಗುರು ಸುತ್ತು ಇದೆಯೇ :* ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
♦ *ಎದೆ ಹಾಲಿನ ಕೊರತೆಯೇ :* ನಿತ್ಯ ಸೇವಿಸಿ ಎಳ್ಳು.
♦ *ಎಲುಬುಗಳ ನೋವೇ :* ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
♦ *ತುಟಿ ಸೀಳಿದಿಯೇ :* ಹಾಲಿನ ಕೆನೆ ಹಚ್ಚಿರಿ.
♦ *ಪಿತ್ತವೇ :* ಚಹಾ ಬಿಟ್ಟುಬಿಡಿ.
♦ *ಉಷ್ಣವೇ :* ಕಾಫಿ ಬಿಟ್ಟುಬಿಡಿ.
♦ *ಚಂಚಲವೇ :* ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
♦ *ಬಹು ಮೂತ್ರವೇ :* ದಾಲ್ಚಿನ್ನಿ ಕಷಾಯ ಸೇವಿಸಿ.
♦ *ಮೂತ್ರ ತಡೆಗೆ :* ಜೀರಿಗೆ ಕಷಾಯ ಸೇವಿಸಿ.
♦ *ಆಯಾಸವೇ :* ಅಭ್ಯಂಗ ಸ್ನಾನ ಮಾಡಿ.
♦ *ಉಗ್ಗು ತೊದಲು ಇದ್ದರೆ :* ದಿನಾಲು ಶಂಖ ಊದಿರಿ.
♦ *ಹಿಮ್ಮಡಿ ಸೀಳುವುದೇ :* ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ
👤👤👤👤👤👤👤👤👤👤👤👤👤
ಆರೋಗ್ಯವೇ ಬಹಳ ಮುಖ್ಯ
ಆಸಿಡಿಟಿ : ಇದು ಬರುವುದು ಬಹಳ ಸುಲಭ. ಇದು ಯಾವುದರಿಂದ ಬರುತ್ತದೆ? ಈ ಆಸಿಡಿಟಿ ಬಂದರೆ ಸಾಕು, ಎಲ್ಲಾ ಖಾಯಿಲೆಗಳಿಗೂ ಆಹ್ವಾನ ಕೊಟ್ಟಂತೆ. ಈ ಆಸಿಡಿಟಿ ಬಹಳ ಅಪಾಯಕಾರಿ ಖಾಯಿಲೆ. ಇದು ಬಂದಾಗ ಜನರೇನು ಮಾಡುತ್ತಾರೆ? ತಕ್ಷಣ ಅಲ್ಲೋಪತಿ ಡಾಕ್ಟರ ಹತ್ತಿರ ಓಡುತ್ತಾರೆ. ಅವರು ಕೊಡುವುದು ಏನನ್ನು ಡೈಜೀನ್ ಎಂಬ ಮಾತ್ರೆಯನ್ನು. ಅದನ್ನು ತೆಗೆದುಕೊಂಡ ತಕ್ಷಣ ಇದು ಮಾಯ. ಆದರೆ ಇದು ಪುನಹ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು.
ಈ ಆಸಿಡಿಟಿ ಬರಲು ಕಾರಣ ಏನೆಂದರೆ ಅತಿಯಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು, ಐಸ್ ಕ್ರೀಮ್, ಅತಿಯಾದ ಕಾಫೀ ಸೇವನೆ, ಅತಿ ಎಣ್ಣೆಯ ಸೇವನೆ, ಇತ್ಯಾದಿ ಗಳಿಂದ ಬರುತ್ತದೆ
👤👤👤👤👤👤👤👤👤👤👤👤👤👤👤👤
ಬಾದಾಮಿ
ಉತ್ತಮ ಸ್ನಾಕ್ಸ್ ಉದಾಹರಣೆಯೇ ಬಾದಾಮಿ.ಇದರಲ್ಲಿ ವಿಟಮಿನ್ ಇ, ನಾರು ಮತ್ತು ಪ್ರೊಟೀನ್ ಸೇರಿದಂತೆ ಒಟ್ಟು 15 ಪೌಷ್ಟಿಕಾಂಶಗಳು ಇದೆ. ಆದ್ದರಿಂದ ಪ್ರತಿದಿನ 30 ಗ್ರಾಂ ಬಾದಾಮಿ ತಿಂದರೆ ಕೆಟ್ಟ ಕೊಲೆಸ್ಟ್ರಲ್,ಅತಿ ತೂಕ ಮತ್ತು ಅಧಿಕ ರಕ್ತದೊತ್ತಡ ನಿವಾರಣೆಯಾಗುತ್ತದೆ. ಹಾಗಂತ ರುಚಿಯಲ್ಲಿ ಸಪ್ಪೆಯಾಗಿರುವ ಬಾದಾಮಿಯನ್ನು ಹಾಗೆ ತಿನ್ನಲು ಕೆಲವರಿಗೆ ಇಷ್ಟವಾಗುವುದಿಲ್ಲ.ಆದರೆ ಇದನ್ನು ಆಹಾರದಲ್ಲಿ ಬೇರೆ ಬೇರೆ ರೂಪದಲ್ಲಿ ಸೇವನೆ ಮಾಡಬಹುದು.ಅದು ಹೇಗೆಂದರೆ.
♦ ಮೊಳಕೆಯ ಸಲಾಡ್ ಅಥವಾ ತರಕಾರಿ ಸಲಾಡ್ ಗೆ ಸ್ವಲ್ಪ ಬಾದಾಮಿ ಹಾಕಿ ಸೇವಿಸಿ.
♦ ಮೊಸರಿಗೆ ಬಾದಾಮಿಯ ಪೇಸ್ಟ್ ಹಾಕಿ ಸೇವಿಸಿ.
♦ ಅವಲಕ್ಕಿ ಅಥವಾ ಉಪ್ಪಿಟ್ಟಿನ ಮೇಲೆ ಬಾದಾಮಿಯ ತರಿಯನ್ನು ಉದುರಿಸಿ ತಿನ್ನಿ.
♦ ಪ್ರತಿ ಬಾರಿಯೂ ತೆಂಗಿನಕಾಯಿ ತಿನ್ನುವುದಕ್ಕಿಂತ ಆಗಾಗ ಬಾದಾಮಿ ಚಟ್ನಿ ಮಾಡಿ ಸೇವಿಸಿ.
♦ ರಾತ್ರಿ ಹಳದಿ ಹಾಕಿದ ಹಾಲಿಗಿಂತ ಬಾದಾಮಿ ಹಾಕಿದ ಹಾಲು ಕುಡಿಯಿರಿ.
♦ ಟೋಮೊಟೊ, ಮಶ್ರೂಮ್ ಅಥವಾ ಸ್ವೀಟ್ ಕಾರ್ನ್ ಸೂಪ್ ಗಿಂತ ಬಾದಾಮಿ ಸೂಪ್ ಮಾಡಿ ಕುಡಿಯಿರಿ.
ಸಂಗ್ರಹ ಮಾಹಿತಿ
👤👤👤👤👥👥👥👥👥👥👥👥👥👥👥
ಟೋಮೊಟೊ ಫೇಸ್ ಪ್ಯಾಕ್ :
♦ ಗಂಧದ + ಮತ್ತು ಸಿಪ್ಪೆ ಮತ್ತು ಬೀಜ ರಹಿತ ಟೋಮೊಟೊ ತಿರುಳು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಒಂಗಳು ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಿರಿ. ವಾರಕ್ಕೆ 2-3 ಬಾರಿ ಇದನ್ನು ಪುನರಾವರ್ತಿಸಿ. ಟೋಮೊಟೊದಲ್ಲಿರುವ ಟ್ಯಾನಿನ್ ಗಾಢ ಮೇಲೆನಿನ್ ಕಣಾ ತಿಳಿಯಾಗಿಸುತ್ತದೆ. ಗಂಧ ಚರ್ಮ ಮತ್ತೆ ಸಹಜವರ್ಣ ಪಡೆಯಲು ಸಹಾಯಕ.
♦ ಕೆಲವೇ ದಿನಗಳಲ್ಲಿ ಚರ್ಮದ ಕಾಂತಿ ಹೆಚ್ಚುತ್ತದೆ.
♦ ಮೊಡವೆ ದೂರವಾಗಿಸಿ, ತುರಿಕೆ ಇಲ್ಲವಾಗಿಸುತ್ತದೆ.
♦ ಕೊಲ್ಯಾಜಿನ್ ಹೆಚ್ಚಿಸಿ ಮುಖ ನೆರಿಗೆ ಬೀಳದಂತೆ ತಡೆಯುತ್ತದೆ.
ಮಾಹಿತಿ: ಆರೋಗ್ಯ ಮಾಹಿತಿ
👤👤👤👤👤👤👤👤👤👤👤👤👤👤👤
ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ?
ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ? ಸರಿಯಾಗಿ ಪೋಷಣೆ ಮಾಡದಿದ್ದರೆ ನಿಮ್ಮ ಕಾಲುಗಳೇ ನಿಮಗೆ ಶತ್ರುವಾಗಬಹುದು. ಅದರಲ್ಲೂ ಮಳೆಗಾಲದಲ್ಲಿ ಹಿಮ್ಮಡಿ ಒಡೆಯುವುದನ್ನು ನಿರ್ಲಕ್ಷಿಸಿದರೆ ಸಹಿಸಲಾರದ ನೋವು. ಒಡೆದ ಹಿಮ್ಮಡಿಯನ್ನು ಮೃದುಗೊಳಿಸುವುದು ಹೇಗೆ ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ. ಒಡೆದ ಹಿಮ್ಮಡಿಗೆ ಸಲಹೆಗಳು: 1. ಪ್ಯೂಮಿಕ್ ಸ್ಟೋನ್: ಮೆಡಿಕಲ್ ಶಾಪ್ ಗಳಲ್ಲಿ ದೊರೆಯುವ ಪ್ಯೂಮಿಕ್ ಸ್ಟೋನ್ ನಿಂದ ಒಣಗಿದ ನಿಮ್ಮ ಹಿಮ್ಮಡಿಗಳನ್ನು ಸ್ನಾನ ಮಾಡುವಾಗ ಸ್ಕ್ರಬ್ ನಂತೆ ಮೃದುವಾಗಿ ಉಜ್ಜಿಕೊಂಡರೆ ನಿರ್ಜೀವ ಕಣಗಳು ತೊಲಗಿ ಪಾದಗಳು ನುಣುಪಾಗುತ್ತದೆ. 2. ಮಾಯಿಶ್ಚರೈಸರ್: ಚರ್ಮ ಒಣಗಲು ಬಿಡದೆ ಪಾದಕ್ಕೆ ಮಾಯಿಶ್ಚರೈಸರನ್ನು ಹಚ್ಚುತ್ತಿದ್ದರೆ ಚರ್ಮ ಮೃದುಗೊಳ್ಳುತ್ತದೆ. ಸಾಕ್ಸ್ ಹಾಕಿಕೊಳ್ಳುವ ಮುನ್ನ ಬಾಡಿ ಲೋಶನ್ ಅಥವಾ ಮಾಯಿಶ್ಚರೈಸರ್ ಲೇಪಿಸಿಕೊಂಡರೆ ಪಾದ ಕೋಮಲವಾಗಿರುತ್ತದೆ. ರಾತ್ರಿ ಹೊತ್ತು ಲೇಪಿಸಿಕೊಂಡು ಮಲಗಿದರೆ ಉತ್ತಮ. 3. ಉಪ್ಪು ನೀರು: ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಮತ್ತು ನಿಂಬೆ ರಸ ಬೆರೆಸಿ 20 ನಿಮಿಷ ಪಾದವನ್ನು ಅದರಲ್ಲಿ ಇಡಬೇಕು. ಉಪ್ಪು ಪಾದವನ್ನು ಮೃದುಗೊಳಿಸಿದರೆ, ನಿಂಬೆ ಕೊಳೆಯನ್ನು ತೊಲಗಿಸುತ್ತದೆ. ಪ್ಯೂಮಿಕ್ ಸ್ಟೋನ್ ನಿಂದ ಮೃದುವಾಗಿ ಉಜ್ಜಿದರೆ ಸ್ವಚ್ಛ ಪಾದ ನಿಮ್ಮದಾಗುತ್ತೆ. 4. ರೊಸ್ ವಾಟರ್: ಗ್ಲಿಸರಿನ್ ಜೊತೆ ರೋಸ್ ವಾಟರ್ ಸೇರಿಸಿ ಅದನ್ನು ಹತ್ತಿಯಿಂದ ಹಚ್ಚಿಕೊಳ್ಳಬೇಕು. ಸುಮಾರು 15 ದಿನ ಈ ನಿಯಮ ಪಾಲಿಸಿದರೆ ಒಡೆದ ಹಿಮ್ಮಡಿ ಬೇಗ ಗುಣಹೊಂದುತ್ತದೆ. 5. ಶೂ ಧರಿಸಿ: ನಿಮ್ಮ ಪಾದಗಳಲ್ಲಿ ತೇವಾಂಶವಿರುವಂತೆ ನೋಡಿಕೊಂಡು ಹಿಮ್ಮಡಿ ಒಡೆಯದಂತಿರಲು ಶೂ ಧರಿಸಿದರೆ ತುಂಬಾ ಉಪಯುಕ್ತ. 6. ನೀರು ಕುಡಿಯಿರಿ: ತುಂಬಾ ಚೆನ್ನಾಗಿ ನೀರು ಕುಡಿದರೆ ದೇಹದೊಂದಿಗೆ ಪಾದವನ್ನೂ ತಣ್ಣಗಿಡುತ್ತದೆ. ಇದು ಹಿಮ್ಮಡಿ ಒಡೆಯದಂತೆ ಒಳಗಿನಿಂದ ರಕ್ಷಣೆ ನೀಡುತ್ತದೆ. 7. ಬಾಳೆಯೊಂದಿಗೆ ಗ್ಲಿಸರಿನ್: ಚೆನ್ನಾಗಿ ಕಳಿತ ಬಾಳೆ ಹಣ್ಣಿಗೆ ಕೆಲವು ಹನಿ ಗ್ಲಿಸರಿನ್ ಬೆರೆಸಿ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಂಡರೆ ಪಾದ ನುಣುಪಾಗಿ ಮಿರುಗುತ್ತದೆ. Topics: ಆರೋಗ್ಯ, ಕಾಲು, heel, foot, health English summary Cracked heels can be a major skin problem if not treated well. The deeper the cracks; the longer it will take to get healed so keep the feet moisturized specially in the winter time. Apart from applying moisturizer before going to bed here are tips to cure cracked heels. Take a look.
👤👤👤👤👤👤👤👤👤👤👤👤👥👥👥👥
*ಡಯಾಬಿಟಿಸ್ ವ್ಯಕ್ತಿಗಳಿಗೆ ಊಟದ ಟೈಮ್ ಟೆಬಲ್*
ಬೆಳಗ್ಗೆ 6 ರಿಂದ 7 ಗಂಟೆಗೆ:
ಹಾಲು/ಟೀ/ಕಾಫಿ – 1 ಲೋಟ (ಸಕ್ಕರೆ ಇಲ್ಲದೆ)
*ಬೆಳಗ್ಗೆ 8 ರಿಂದ 9 ಗಂಟೆಗೆ:
ಇಡ್ಲಿ – 3/ ದೋಸೆ -2/ ಉಪ್ಪಿಟ್ಟು – 1 ಕಪ್ / ಮಂಡಕ್ಕಿ – 1 ಕಪ್/ ಅವಲಕ್ಕಿ – 1 ಕಪ್/ ರಾಗಿ ಗಂಜಿ – 1 ಕಪ್.
*ಬೆಳಗ್ಗೆ 11 ಗಂಟೆಗೆ:
ನಿಂಬೆ ಜ್ಯೂಸ್ / ಟಮೆಟೊ ಜ್ಯೂಸ್ /(ಸಕ್ಕರೆ ಇಲ್ಲದೆ) – 1 ಕಪ್ / ತರಕಾರಿ ಸಲಾಡ್ – 1 ಕಪ್ / ವೆಜ್ ಸೂಪು – 1 ಕಪ್ / ಮೊಳಕೆ ಕಾಳುಗಳು – ಕಪ್
ಮಧ್ಯಾಹ್ನ 1 ರಿಂದ 2 ಗಂಟೆಗೆ:
ಚಪಾತಿ -2 (ಎಣ್ಣೆ ರಹಿತ), ರಾಗಿ ಮುದ್ದೆ – 1 (150 ಗ್ರಾಂ), ಅನ್ನ – 1 ಕಪ್/ ಸಾಂಬರ್ – 1 ಕಪ್ ವೆಜ್ ಸಲಾಡ್ / ಹಸಿರು ತರಕಾರಿ (ಬೀಟ್ ರೂಟ್, ಕ್ಯಾರೆಟ್, ಆಲೂಗಡ್ಡೆಬಿಟ್ಟು), ಕೆನೆಯಿಲ್ಲದ ಮೊಸರು ½ ಕಪ್ / ಕಾಳುಗಳು (ಮಡಕೆ ಕಾಳು, ಹೆಸರು ಕಾಳು ರಾಜ್ಮಾ/ ಕಡ್ಲೆಕಾಳು – 1 ಕಪ್)
ಸಂಜೆ 4 ರಿಂದ 5 ಗಂಟೆಗೆ:
ಗೋಧಿ ಉಪ್ಪಿಟ್ಟು – 1 ಕಪ್ / ರವಾ ಕಿಚಡಿ – 1ಕಪ್/ ಟೀ/ ಕಾಫಿ/ ಹಾಲು – 1 ಕಪ್ (ಸಕ್ಕರೆ ಇಲ್ಲದೆ)/ ಮಂಡಕ್ಕಿ – 1 ಕಪ್ / ಮೊಳಕೆ ಕಾಳುಗಳು – ಕಪ್.
ರಾತ್ರಿ 8 ರಿಂದ 9 ಗಂಟೆ:
ಚಪಾತಿ- 2, or ರಾಗಿ ಮುದ್ದೆ – 1, or ಸಾಂಬರ್ – 1 ಕಪ್, or ವೆಜ್ ಸಲಾಡ್ – 1 ಕಪ್ , or ಮೊಸರು – ½ ಕಪ್ .
ತಿನ್ನಬಾರದಂತಹ ತಿನಿಸುಗಳು
1)ಸಕ್ಕೆರೆ, ಬೆಲ್ಲ , ಜೇನು ತುಪ್ಪ , ಚಾಕಲೇಟ್ , ಕೋಲಾಗಳು , ಜಾಮ್.
2)ಬಾಳೆ ಹಣ್ಣು , ಮಾವಿನ ಹಣ್ಣು , ಅನಾನಸ್ , ಸೀತಾಫಲ , ಸಪೋಟ , ಕಲ್ಲಂಗಡಿ.
3)ಗಿಣ್ಣ , ಬೆಣ್ಣೆ , ಕೆನೆ , ಖೋವ , ತುಪ್ಪ , ತೆಂಗಿನ ಎಣ್ಣೆ , ವನಸ್ಪತಿ , ಡಾಲ್ಡ.
4)ಬೇಕರಿ ತಿಂಡಿಗಳು: ಬ್ರೆಡ್ , ಬನ್ , ಕೇಕ್ , ಬಿಸ್ಕತ್ , ಬೊರ್ನವಿಟಾ , ಹಾರ್ಲಿಕ್ಸ್.
5)ಕರಿದ ತಿಂಡಿಗಳು: ಚಿಪ್ಸ್ , ವಡೆ , ಬೊಂಡ , ಕರಿದ ಮಾಂಸ, ತೆಂಗಿನ ಕಾಯಿ.
6)ಖರ್ಜೂರ , ಗೊಡಂಬಿ , ದ್ರಾಕ್ಷಿ.
7)ಮೈದಾಹಿಟ್ಟಿನ ತಿನಿಸುಗಳು.
ತಿನ್ನಬಹುದಾದಂತಹ ತಿನಿಸುಗಳು:
1)ಸಕ್ಕರೆ ಇಲ್ಲದ ಕಾಫಿ, ಟೀ
2)ಸೂಪ್, ರಸಮ್, ಮಜ್ಜಿಗೆ, (ಕೆನೆ ರಹಿತ)
3)ಹಸಿ ತರಕಾರಿಗಳು (ಆಲೂಗಡ್ಡೆ, ಬೀಟ್ ರೂಟ್, ಕ್ಯಾರೆಟ್ ಬಿಟ್ಟು.)
4)ಟೊಮೊಟೊ ಜ್ಯೂಸ್, ನಿಂಬೆ ಹಣ್ಣಿನ ಜ್ಯೂಸ್.
5)ಮೊಸಂಬಿ, ಪಪ್ಪಾಯಿ, ಕಿತ್ತಳೆ.
6) ಮೀನು, ಮೊಟ್ಟೆಯ ಬಿಳಿ ಭಾಗ, ಕೋಳಿ ಮಾಂಸ (ಚರ್ಮ ರಹಿತ)
*ಸಲಹೆಗಳು*:
*ದಿನಕ್ಕೆ ಒಂದು ಬಾರಿ ಮಾತ್ರ ಅನ್ನ ಉಪಯೋಗಿಸಿ.
*ಇಡೀ ಕಾಳುಗಳು, ಸೊಪ್ಪು ಜಾಸ್ತಿಯಾಗಿ ಸೇವಿಸಿ.
*ಜ್ಯೂಸ್ ಗಳ ಬದಲಿಗೆ ಸಿಪ್ಪೆ ಸಹಿತ ಹಣ್ಣುಗಳನ್ನು ಬಳಸಿ.
*ಎಣ್ಣೆ, ಉಪ್ಪು ಮತ್ತು ತೆಂಗಿನಕಾಯಿ ಅಡಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬಳಸಿ.
*ಸೋಡ, ಬೇಕಿಂಗ್ ಪೌಡರ್ ಯಾವುದೇ ಅಡುಗೆಯಲ್ಲಿ ಕಡಿಮೆ ಮಾಡಿ.
ಎಣ್ಣೆ ದಿವಸಕ್ಕೆ 2-3 ಟೀ ಚಮಚ ಮಾತ್ರ (10 ರಿಂದ 15 ಗ್ರಾಂ)
1 ಕಪ್ – 150 ಎಂ.ಎಲ್
1 ಟೀ ಸ್ಪೂನ್ – 5ಗ್ರಾಂ
1 ಗ್ಲಾಸ್ – 200 ಎಂ.ಎಲ್
ಕಾಳುಗಳು, ದಾನ್ಯಗಳು. ಅನ್ನ (1 ಕಪ್) – 40 ಗ್ರಾಂ
*** ದಿನಕ್ಕೆ 45 ನಿಮಿಷ ಬಿರುಸಿನ ನಡಿಗೆ ಕಡ್ಡಾಯವಾಗಿ ಮಾಡಿ. (ಕನಿಷ್ಠ ವಾರದಲ್ಲಿ 5 ದಿನವಾದರೂ ಮಾಡಿ.)***ಸ
ಈ ರೀತಿಯ ಹಲವಾರು ರೋಗಿಗಳಲ್ಲಿ ಕಂಡುಬಂದಿರುವ ಒಂದು ಉಪಯುಕ್ತ ಸತ್ಯವೆಂದರೆ ಸಕ್ಕರೆ ಅಂಶವನ್ನು ಜೀರ್ಣಿಸುವ ಕ್ರಿಯೆಯಲ್ಲಿ ತೊಂದರೆಯಿರುವುದೇ ಮುಖ್ಯ ಕಾರಣ. ಈ ಕಾರಣದಿಂದ ಅಂತಹ ವ್ಯಕ್ತಿಗಳು ತಮ್ಮ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.
ಹಾಗೆಯೇ ಕಡಿಮೆ ಪ್ರಮಾಣದ ಕೊಬ್ಬಿನ ಸೇವನೆಯು ಸಕ್ಕರೆ ಅಂಶದ ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ ರಕ್ತನಾಳಗಳ ಸಂಬಂಧಿತ ರೋಗಗಳಿಗೆ ಕಾರಣವಾಗಬಹುದು. ಈ ದೃಷ್ಟಿಯಿಂದ ಕಡಿಮೆ ಅಂಶದ ಸಕ್ಕರೆ ಹಾಗೂ ಕೊಬ್ಬಿನ ಆಹಾರವನ್ನು ಎಲ್ಲಾ ಸಕ್ಕರೆ ರೋಗಿಗಳೂ ಪಾಲಿಸಬೇಕು. ಇನ್ನಿತರ ಸಂಶೋಧನೆಯಿಂದ ತಿಳಿದಿರುವ ಅಂಶವೆಂಅದರೆ ಹೆಚ್ಚು ಪ್ರೋಟೀನ್ ಯುಕ್ತ ಆಹಾರ ಪದಾರ್ಥಗಳು ಶರೀರದ ಆರೋಗ್ಯಕ್ಕೆ ಸಕ್ಕರೆ ಕಾಯಿಲೆಯವರಲ್ಲಿ ಉತ್ತಮ ಫಲಿತಾಂಶ ಕೊಡುತ್ತದೆ. ಆದರೆ ಈ ರೋಗಿಗಳಲ್ಲಿ ಬೇರೆ ರೀತಿಯ ಮೂತ್ರಪಿಂಡ ಕಾಯಿಲೆಯು ಇರಬಾರದು ಅಥವಾ ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ನರಳುತ್ತಿರಬಾರದು.
ಈ ಕ್ರಮಗಳಿಂದ ದೇಹದ ತೂಕ ಕಡಿಮೆ ಮಾಡುವ ಅವಶ್ಯಕತೆ ತನ್ನಷ್ಟಕ್ಕೆ ಆಹಾರ ಮೂಲಕ ಸ್ವಲ್ಪ ಮಟ್ಟಿಗೆ ಸರಿಹೊಂದಿಕೊಳ್ಳುತ್ತದೆ ಮತ್ತು ಔಷಧಿ ಸೇವಿಸುವ ಪ್ರಮಾಣ ಕಡಿಮೆಯೂ ಆಗಬಹುದು.
ನಿಮ್ಮ ಆಹಾರದ ಮೇಲೆ ನಿಗಾಯಿರಲಿ. ಆದರೆ ವಿಪರೀತ ಶಿಸ್ತು ಆಹಾರದ ಕಟ್ಟುನಿಟ್ಟೂ ಒಳ್ಳೆಯದೂ ಅಲ್ಲ.
👤👤👤👤👤👤👤👤👥👤👤👤👤👤👤
ಹಿಂದೆ ಕೇವಲ ವಯಸ್ಸಾದರವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಳಿಕೂದಲು ಇತ್ತೀಚೆಗೆ ಸಣ್ಣ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಂಡು ಮುಜುಗರ ಉಂಟು ಮಾಡುತ್ತಿದೆ.
ದೇಹದಲ್ಲಿ ಬಣ್ಣ ತಯಾರಿಸುವಂತಹ ಕೋಶಗಳು ಅಗತ್ಯವಿರುವಷ್ಟು ಪ್ರಮಾಣದ ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಬಿಳಿ ಕೂದಲು ಬರುತ್ತದೆ. ಪ್ರತಿಯೊಂದು ಕೂದಲಿನ ಕೋಶಗಳ ವರ್ಣದ್ರವ್ಯ ಸಂಭಾವ್ಯತೆಯನ್ನು ನಿಮ್ಮ ಜೀನ್ಗಳು ನಿರ್ಧರಿಸುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ಕೂದಲು ಬಿಳಿಯಾಗಲು ಪ್ರಮುಖ ಕಾರಣವಾಗಿದೆ. ನಿಮ್ಮ ಕೂದಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ. ನಿಮಗೆ ವಯಸ್ಸಾಗುತ್ತಿರುವಂತೆ ಇದರ ಉತ್ಪಾದನೆಯು ಹೆಚ್ಚಾಗುತ್ತದೆ. ಇದರಿಂದಾಗಿ ಕೂದಲು ಬಿಳಿಯಾಗುತ್ತದೆ.
ಮನೆಯಲ್ಲಿಯೇ ಕೆಲವು ವಸ್ತುಗಳನ್ನು ಬಳಸಿಕೊಂಡು ಬಿಳಿ ಕೂದಲನ್ನು ತಡೆಗಟ್ಟಬಹುದು.
ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನಸಿಡಿ.
ನೀರಿನಿಂದ ತೆಗೆದ ಬಳಿಕ ಬಿಸಿಲಿನಲ್ಲಿ ಅದು ಕಂದು ಬಣ್ಣಕ್ಕೆ ಬರುವ ತನಕ ಮತ್ತು ಗರಿಗರಿ ಆಗುವ ತನಕ ಒಣಗಿಸಿ.
ಒಣಗಿದ ಎಲೆಗಳನ್ನು ಸರಿಯಾಗಿ ಪುಡಿ ಮಾಡಿಕೊಳ್ಳಿ.
ಪಾತ್ರೆಯಲ್ಲಿತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.
ಅದಕ್ಕೆ ನಾಲ್ಕು ಚಮಚ ಕರಿಬೇವಿನ ಪುಡಿಯನ್ನು ಹಾಕಿ.
ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಕುದಿಯಲಿ.
ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ನಂತರ ಇದನ್ನು ಒಂದು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ.
ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ. ಇದನ್ನು ಒಂದು ವಾರ ಕಾಲ ಬಳಸಿದಾಗ ಕೂದಲು ಕಪ್ಪಗಾಗುತ್ತದೆ.
👤👤👤👤👤👤👤👤👤👤👤👤👤👤👤👤
ಬಹಳಷ್ಟು ಮಂದಿಗೆ ಬಸ್ ಪ್ರಯಾಣ ಅಂದ್ರೆ ಆಗಲ್ಲ.. ಬಸ್ ನಲ್ಲಿ ಪ್ರಯಾಣಿಸುವಾಗ ವಾಂತಿ ಬರುವಂತಾಗುವುದು, ಹೊಟ್ಟೆ ತೊಳೆಸಿದ ಅನುಭವ ಆಗುತ್ತದೆ. ಇದರಿಂದ ವಾಂತಿಯೂ ಆಗುತ್ತದೆ. ಹೆಚ್ಚಾಗಿ ತಿರುಪತಿಯಂತಹ ಬೆಟ್ಟ ಹತ್ತುವಾಗ, ಶಿರಾಡಿ ಘಾಟ್ ನಂತಹ ರಸ್ತೆಗಳಲ್ಲಿ ಸಂಚರಿಸುವಾಗ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಈ ರೀತಿ ಬಹಳಷ್ಟು ಮಂದಿಗೆ ಪ್ರಯಾಣದಲ್ಲಿ ವಾಂತಿ ಆಗುತ್ತಿರುತ್ತದೆ. ಅಂತಹವರು ಪ್ರಯಾಣಕ್ಕೆ ಮುನ್ನ ಕೆಲವೊಂದು ಸೂಚನೆಗಳನ್ನು ಪಾಲಿಸಿದರೆ ಈ ಸಮಸ್ಯೆಯಿಂದ ಹೊರಬೀಳಬಹುದು…
ಸಣ್ಣ ಶುಂಠಿ ಚೂರನ್ನು ದವಡೆಯಲ್ಲಿಟ್ಟುಕೊಂಡರೆ ವಾಂತಿಯಾಗುವ ಅವಕಾಶ ಕಡಿಮೆಯಾಗುತ್ತದೆ. ಶುಂಠಿಯಲ್ಲಿನ ಕ್ಯಾಲ್ಸಿಯಂ, ಪಾಸ್ಪರಸ್, ಐರನ್, ಮೆಗ್ನಿಷಿಯಂ, ಕಾಪರ್, ಜಿಂಕ್ ನಂತಹವು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು.
ಅಡಿಕೆ ಚೂರನ್ನು ಚಪ್ಪರಿಸಿದರು ಈ ಸಮಸ್ಯೆಯಿಂದ ಪಾರಾಗಬಹುದು.
ನಿಂಬೆಹಣ್ಣನ್ನು ಮೂಗಿನ ಬಳಿ ಇಟ್ಟುಕೊಂಡು ವಾಸನೆಯನ್ನು ಆಘ್ರಾಣಿಸುತ್ತಿದ್ದರೂ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಲವಂಗ, ಸೋಂಪನ್ನು ದವಡೆಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದರು ವಾಮಿಟಿಂಗ್ ಸೆನ್ಸೇಷನ್ ಕಡಿಮೆಯಾಗುತ್ತದೆ…
ಮುಖ್ಯವಾಗಿ ಬಸ್ ನಲ್ಲಾಗಲಿ, ಕಾರಿನಲ್ಲಾಗಲಿ ಪ್ರಯಾಣಿಸುವಾಗ ಮುಂದಿನ ಸೀಟ್ ನಲ್ಲಿ ಕುಳಿತು ನಮ್ಮ ದೃಷ್ಟಿಯನ್ನು ನೇರವಾಗಿ ನೋಡಿದರು ವಾಮಿಟಿಂಗ್ ಸೆನ್ಸೇಷನ್ ನಿಂದ ತಪ್ಪಿಸಿಕೊಳ್ಳಬಹುದು.
👤👤👤👤👤👤👤👤👤👤👤👤👤👤👤👤
ಮನೆಯಲ್ಲೇ ಮೊಡವೆಗಳಿಗೆ ಔಷಧಿ
೧. ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಮುಖದಲ್ಲಿ ಇಲ್ಲದಂತಾಗುವುದು.
೨. ಕೊತ್ತಂಬರಿಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರ ಮಾಡಿ, ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಕಣ್ಮರೆ ಆಗುವುವು.
೩. ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಅರೆದು, ಹತ್ತಿಯೊಂದಿಗೆ ಆ ಮಿಶ್ರಣವನ್ನು ಅದ್ದಿ ಮೊಡವೆಯ ಮೇಲೆ ಸವರುತ್ತಿದ್ದರೆ ಮೊಡವೆಯ ಗುರುತು ಮಾಯವಾಗುವುದು.
೪. ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಅರೆದು ಪುಡಿ ಮಾಡಿ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಶೀಘ್ಹ್ರದಲ್ಲಿಯೇ ಮೊಡವೆಯ ಗುಳ್ಳೆ ಕರಗುವುದು.
೫. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ವಾರದ ಒಳಗಾಗಿ ಮೊಡವೆ ಗುಳ್ಳೆಗಳು ಮಾಯ ಆಗುವುವು. ಜೊತೆಗೆ ಮುಖ ಕಾಂತಿ ಹೆಚ್ಚುವುದು.
೬. ಎಳೆನೀರಿನಲ್ಲಿ ಕೆಲವು ವಾರ ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಗುತ್ತವೆ. ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಮಾಯ ಆಗುವುವು. ಮುಖದ ಮೇಲೆ ಹೊಳಪು ಹೆಚ್ಚುವುದು.
೭. ಕಿತ್ತಲೆ ಸಿಪ್ಪೆಯನ್ನು ಮುಖದಮೇಲೆ ಉಜ್ಜುತ್ತಿದ್ದರೆ ಅದರಿಂದ ಸುವಾಸನೆಯ ದ್ರವ ಹೊರಬಂದು ಮೊಡವೆ ಗುಳ್ಳೆಗಳು ಒಣಗುವುವು.
೮. ನಿಂಬೇರಸದಲ್ಲಿ ದಾಲ್ಚಿನ್ನಿಯನ್ನು ತೇಯ್ದು ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುವುವು.
೯. ಗರಿಕೆ ಹುಲ್ಲಿನ ರಸವನ್ನು ಮುಖದಮೇಲೆ ಲೇಪಿಸುವುದರಿಂದ ಮೊಡವೆಗಳು ಮಾಗುವುವು.
೧೦. ಹಿಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುತ್ತಿದ್ದರೂ ಸಹಾ ಮೊಡವೆ ಗುಳ್ಳೆಗಳು ಮುಖದ ಮೇಲೆ ಕಾಣದಂತಾಗುವುದು.
ಇದಕ್ಕಿಂತ ಮುಖ್ಯವಾಗಿ ಈ ಯಾವುದೇ ಚರ್ಮ ರೋಗಗಳು ಬರುವುದು ಹೊಟ್ಟೆಯೊಳಗಿಂದ. ಹೊಟ್ಟೆ ಶುದ್ಧ ಆಗಿದ್ದರೆ ಯಾವುದೇ ತರಹದ ಚರ್ಮ ರೋಗಗಳು ಬರುವುದಿಲ್ಲ. ಇದಕ್ಕಾಗಿ ತಿಂಗಳಿಗೆ ಒಂದು ಸಲ ಭೇದಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿ ಹೊಟ್ಟುಳ್ಳ ಧಾನ್ಯಗಳನ್ನು ಸೇವಿಸಬೇಕು. ನಮ್ಮ ದೇಹವೂ ಸಹಾ ನಮ್ಮ ಮನೆಯಲ್ಲಿರುವ ಚರಂಡಿಯಂತೆ. ಮನೆಯಲ್ಲಿರುವ ಚರಂಡಿಗೆ ಏನೇನೊ ಹಾಕಿದರೆ ಹೇಗೆ ಮನೆಯೆಲ್ಲಾ ಹಾಳಾಗುತ್ತದೋ, ಅದೇ ರೀತಿ ನಮ್ಮ ದೇಹದ ಚರಂಡಿ ಕೂಡ. ಎಣ್ಣೆಯಲ್ಲಿ ಕರಿದ ತಿಂಡಿಗಳು, ಮೈದಾ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳು ಮತ್ತು ಕರಿದ ತಿಂಡಿಗಳು, ಮೈದಾ ದೋಸೆ, ಮೈದಾ ಬ್ರೆಡ್ ಇತ್ಯಾದಿಗಳನ್ನು ತಿಂದರೆ ಹೊರಗಿನ ಯಾವ ಔಷಢಿಗಳಿಗೂ ಈ ರೋಗಗಳು ವಾಸಿಯಾಗುವುದಿಲ್ಲ. ವೃಥಾ ಹಣ ಪೋಲು.
Subscribe to:
Posts (Atom)